ಮಡಿಕೇರಿಯಲ್ಲಿ ಧಾರಕಾರ ಮಳೆ

mdk14jay5
Published on

ಮಡಿಕೇರಿ: ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಬುಧವಾರ ಗುಡುಗು, ಗಾಳಿ ಮಿಶ್ರಿತ ಧಾರಕಾರ ಮಳೆಯಾಗಿದೆ.

ಕಳೆದ ಎರೆಡು ದಿನಗಳ ಹಿಂದೆ ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಸಾಧರಣ ಮಳೆಯಾಗಿತ್ತು. ಬುಧವಾರ ಮತ್ತೊಮ್ಮೆ ವರುಣ ಸುಡು ಬಿಸಿಲಿನಿಂದ ಬೇಯುತ್ತಿದ್ದ ಜನತೆಗೆ ತಂಪನ್ನೆರೆಯಿತು.

ಬುಧವಾರ ಮಧ್ಯಾಹ್ನ ಸುಮಾರು ೧.೪೫ಕ್ಕೆ ಆರಂಭವಾದ ಮಳೆ ಮುಕ್ಕಾಲು ಗಂಟೆಗಳಕಾಲ ಧಾರಕಾರವಾಗಿ ಸುರಿಯಿತು. ಏಕಾಏಕಿ ಸುರಿದ ಮಳೆಯ ಪರಿಣಾಮ ಸಾರ್ವಜನಿಕರು, ಬೀದಿಬದಿ ವ್ಯಾಪಾರಿಗಳು, ದ್ವಿಚಕ್ರ ಸವಾರರು ಪರದಾಡಿದರು.

ಇತ್ತೀಚೆಗೆ ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ೨೭೫ರ ಇಕ್ಕೆಲಗಳಲ್ಲಿ ಹಾಕಲಾಗಿದ್ದ ಮಣ್ಣು ಬುಧವಾರ ಸುರಿದ ಮಳೆಗೆ ಕೊಚ್ಚಿಹೋಗಿದೆ. ಏಕಾಏಕಿ ಸುರಿದ ಮಳೆಗೆ ನಗರದ ಚರಂಡಿಗಳು ತುಂಬಿ ರಸ್ತೆಯಲ್ಲಿ ನೀರು ಹರಿದ ದೃಶ್ಯ ಕಂಡುಬಂತು. ರಾಜಸೀಟ್ ಉದ್ಯಾನದಲ್ಲಿ ಗಾಳಿ ಮಿಶ್ರಿತ ಮಳೆಯ ರಬಸಕ್ಕೆ ಮರದ ರೆಂಬೆಯೊಂದು ಮುರಿದು ಬಿದ್ದಿದೆ. ಪರಿಣಾಮ ಕೆಲವು ಹೂವಿನ ಗಿಡಗಳು ನೆಲಕಚ್ಚಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net