ಗುಡುಗು-ಮಿಂಚು ಸಹಿತ ಮಳೆ

IMG-20240513-WA0183
Published on

ಅರಸೀಕೆರೆ: ತಾಲೂಕಿನ ಕಸಬಾ ಹೋಬಳಿ ಅಗ್ಗುಂದ ಗ್ರಾಮದಲ್ಲಿ ಭಾನುವಾರ ಸಂಜೆ ಅರ್ಧ ಗಂಟೆಗೂ ಹೆಚ್ಚು ಕಾಲ ಬಾರಿ ಗುಡುಗು-ಮಿಂಚು ಸಹಿತ ಮಳೆಯಾಗಿ, ಇಳೆ ತಂಪಾಯಿತು.

ಬಿರುಗಾಳಿಗೆ ಗ್ರಾಮದ ಸುತ್ತಮುತ್ತ ಅಲ್ಲಲ್ಲಿ ಗಿಡ-ಮರಗಳು ನೆಲಕ್ಕುರುಳಿವೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿದ್ದ ಬೃಹತ್ ಮರ ಹಾಗೂ ವಿದ್ಯುತ್ ಕಂಬ ಮುರಿದು ಗುರುಸ್ವಾಮಿ ಅವರ ಮನೆ ಮೇಲೆ ಬಿದ್ದಿದೆ. ಮನೆಯಲ್ಲಿದ್ದ ರಾಗಿ, ದಿನಸಿಗಳು ಹಾಳಾಗಿ ಪಾತ್ರೆಗಳು ಜಖಂಗೊಡಿವೆ. ಗುರುಸ್ವಾಮಿ ಅವರಿಗೆ ನಷ್ಟ ಉಂಟಾಗಿದ್ದು, ಅದನ್ನು ತಾಲೂಕು ಆಡಳಿತ ಭರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net