ಶಾಲಾ ಕೊಠಡಿಗೆ ನುಗ್ಗಿದ ಮಳೆ ನೀರು

14GDG05(1)
Published on

ಗದಗ: ಗುರುವಾರ ತಡರಾತ್ರಿ ಸುರಿದ ಮಳೆಯಿಂದಾಗಿ ಜಿಲ್ಲೆಯ ಕಣಗಿನಹಾಳ ಗ್ರಾಮದ ಸರ್ಕಾರಿ ಶಾಲಾ ಕೊಠಡಿಗೆ ಮಳೆ ನೀರು ನುಗ್ಗಿದ ಪರಿಂಆಮ ಮಕ್ಕಳು ಕೆಸರಿನಲ್ಲಿಯೇ ಕುಳಿತು ಪಾಠ ಕೇಳುವಂತಹ ಸಂದರ್ಭ ಉದ್ಭವಿಸಿತು.
ಶಾಲಾ ಪಕ್ಕದಲ್ಲಿ ಇರುವ ಗ್ರಾಮದ ಹಳ್ಳ ತುಂಬಿ ಶಾಲೆಗೆ ನುಗ್ಗಿದ ಹಿನ್ನೆಲೆ ಕಿರಿಯ ಪ್ರಾಥಮಿಕ ಶಾಲೆ ಸಂಪೂರ್ಣ ಜಲಾವೃತಗೊಂಡಿದೆ. ಶುಕ್ರವಾರ ಮಕ್ಕಳು ಶಾಲೆಗೆ ತೆರಳಿದ ಸಂದರ್ಭದಲ್ಲಿ ಕೆಲಹೊತ್ತು ಪಾಠ ಸ್ಥಗಿತಗೊಳಿಸಲಾಯಿತು. ತದನಂತರ ಶಿಕ್ಷಕರು ಕೆಸರು ತುಂಬಿದ ಕೊಠಡಿಯಲ್ಲೇ ಪಾಠ ಮಾಡಿದರು.
ಹಳ್ಳದ ನೀರು ಬಾರದಂತೆ ಕ್ರಮ ವಹಿಸಬೇಕೆಂದು ವಿದ್ಯಾಥಿರ್ಗಳು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net