ನ್ಯಾಮತಿಯಲ್ಲಿ ಕೊಂಚ ಬಿಡುವು ಕೊಟ್ಟ ಮಳೆ

Niamathi, Tunganale, Cheetah,
Published on

ನ್ಯಾಮತಿ: ತಾಲೂಕಾದ್ಯಂತ ಕಳೆದ ಎರಡು ದಿನಗಳಿಂದ ಮಳೆ ಕೊಂಚ ಇಳಿಕೆಯಾಗಿದ್ದು, ಬುಧವಾರವೂ ಬಿಡುವು ಕೊಟ್ಟಿತ್ತು. ಕೆಲವೆಡೆ ಮನೆ, ಬೆಳೆ ಹಾನಿಯಾಗಿದೆ.

ತಾಲೂಕಿನ ಕುಂಕುವ ಗ್ರಾಮದಲ್ಲಿ 3, ಬಿದರಹಳ್ಳಿ 1, ಚೀ.ಕಡೆದಕಟ್ಟೆ 2 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ತಾಲೂಕಿನ ತಗ್ಗು ಪ್ರದೇಶದ ಜಮೀನುಗಳಲ್ಲಿ ಬೆಳೆ ಹಾನಿ ಆಗಿದೆ. ಯರಗನಾಳ್ ಗ್ರಾಮದ 20 ಗುಂಟೆ ಜಮೀನಿನಲ್ಲಿ ಬೆಳೆದಿದ್ದ ಮೆಣಸಿನಕಾಯಿ ಮತ್ತು ಸಾಲಬಾಳು ಗ್ರಾಮದ ಹತ್ತಿಗೆ ಹಾನಿಯಾಗಿದ್ದು, ಸಂಬಂಧಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಸವಳಂಗದಲ್ಲಿ ಅಧಿಕ ಮಳೆ: ಸವಳಂಗ 21 ಮಿ.ಮೀ, ಬೆಳಗುತ್ತಿ 3.8, ಗೋವಿನಕೋವಿ 02 ಮಿ.ಮೀ. ಮಳೆ ಮಂಗಳವಾರ ಸುರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net