ಕೋಟೆ ಮುಂಡುಗಾರು ರಸ್ತೆಯೇ ಹೊಳೆಯಾಗಿ ಹರಿಯುತ್ತಿದೆ

IMG_20220717_121127
Published on

ಮಂಗಳೂರು: ಸುಳ್ಯ ತಾಲೂಕಿನ ಬೇಂಗಮಲೆ, ಚೊಕ್ಕಾಡಿ, ಅಯ್ಯನಕಟ್ಟೆ ರಸ್ತೆಯ ಕಳಂಜ ಗ್ರಾಮದ ಕೋಟೆ ಮುಂಡುಗಾರು ಎಂಬಲ್ಲಿ ರಸ್ತೆಯೇ ಹೊಳೆಯಾಗಿ ಹರಿಯುತ್ತಿದೆ.

ಚರಂಡಿಯನ್ನು ದುರಸ್ತಿ ಮಾಡದೇ ಇರುವುದರಿಂದ ಚರಂಡಿಯಲ್ಲಿ ಹೂಳು, ಹೊಯ್ದೆ ತುಂಬಿ ಮಳೆ ಬರುವಾಗ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಈ ರಸ್ತೆಯು ಕೋಟೆ ಮುಂಡುಗಾರು ಸೊಸೈಟಿ, ಶಾಲೆ, ಅಂಗನವಾಡಿ, ಗ್ರಾಮ ಪಂಚಾಯತ್ ಮತ್ತು ಹಾಲು ಸೊಸೈಟಿಗೆ ವಿಭಜನೆಗೊಳ್ಳುವ ಭಾಗದಲ್ಲಿ ಸಂಪೂರ್ಣ ರಸ್ತೆ ಜಲಮಯವಾಗುತ್ತದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಈ ಕಡೆ ಗಮನ ಹರಿಸಿ ಸಮಸ್ಯೆ ಬಗೆ ಹರಿಸುವಂತೆ ಕಳಂಜ ಬಳಕೆದಾರರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net