ಮಳೆ ನೀರು ಮನೆಗೆ ನುಗ್ಗಿ ಪರದಾಟ

Rain water entered the house and spread
ಇಳಕಲ್ಲದ ಅಲಂಪುರಪೇಟೆ ಭಾಗದ ಸಾಕಾ ಗ್ರಾನೈಟ್ ಫ್ಯಾಕ್ಟರಿ ರಸ್ತೆಯಲ್ಲಿ ಹಲವಾರು ಮನೆಗಳಿಗೆ ಮಳೆ ನೀರು ನುಗ್ಗಿರುವುದು.
Published on

ಇಳಕಲ್ಲ(ಗ್ರಾ): ನಗರದಲ್ಲಿ ಶನಿವಾರ ಬೆಳಗ್ಗೆ ಆಶ್ಲೇಷಾ ಮಳೆ ಜೋರಾಗಿ ಸುರಿಯಿತು. ಒಂದೂವರೆ ಗಂಟೆ ಸುರಿದ ಮಳೆ ಕಳೆದೆರಡು ದಿನಗಳಿಂದ ಇದ್ದ ಸೆಖೆ ವಾತಾವರಣವನ್ನು ಹೋಗಲಾಡಿಸಿತು.

ತರಕಾರಿ ಮಾರಾಟ ಮಾಡುವ ವ್ಯಾಪಾರಸ್ಥರು ತೊಂದರೆಗೆ ಸಿಲುಕಿದರು. ಹಾಲಿನ ಪಾಕೆಟ್‌ಗಳ ವಿತರಣೆಗೂ ಅಡ್ಡಿ ಉಂಟಾಯಿತು.

ನಗರದ ಅಲಂಪುರಪೇಟೆ ಭಾಗದ ಸಾಕಾ ಗ್ರಾನೈಟ್ ಫ್ಯಾಕ್ಟರಿ ರಸ್ತೆಯಲ್ಲಿ ಹಲವಾರು ಮನೆಗಳಿಗೆ ಮಳೆ ನೀರು ನುಗ್ಗಿ ನಿವಾಸಿಗಳಿಗೆ ತೊಂದರೆಯಾಗಿರುವ ಸುದ್ದಿ ತಿಳಿದು ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ಇಲ್ಲಿನ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು ಎಂದು ಸಾರ್ವಜನಿಕರು ಅಧಿಕಾರಿಗಳನ್ನು ಒತ್ತಾಯಿಸಿದರು.

ತಾಲೂಕಿನ ವಜ್ಜಲ ಗ್ರಾಮದಲ್ಲಿ ಬಿದ್ದ ಭಾರಿ ಮಳೆಯಿಂದ ಹಳ್ಳಗಳು ತುಂಬಿ ಹರಿದಿವೆ. ಹಳೆಯ ಮನೆಗಳಲ್ಲಿ ವಾಸ ಮಾಡುತ್ತಿದ್ದ ಗ್ರಾಮಸ್ಥರು ಸಾಕಷ್ಟು ತೊಂದರೆ ಅನುಭವಿಸಿದರು ಎಂದು ಸಿತಿಮಾ ವಜ್ಜಲ ಪತ್ರಿಕೆಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net