ಬೆಳೆಗಳಿಗೆ ಜೀವಕಳೆ ತಂದ ಮಳೆ

16ark2 (1)
Published on

ಅರಕಲಗೂಡು: ಈ ಬಾರಿಯ ಮುಂಗಾರು ಮಳೆ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದು, ಬೆಳೆಗಳಿಗೆ ಜೀವಕಳೆ ಬಂದಂತಾಗಿದೆ.

ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಗುರುವಾರ ದಿನವಿಡೀ ಧಾರಾಕಾರ ಮಳೆ ಸುರಿಯಿತು. ವರುಣನ ಕೃಪೆಯಿಂದಾಗಿ ಬೆಳೆಗಳಿಗೆ ಹಸುರಾಗಿ ಕಾಣತೊಡಗಿದೆ.

ಕಳೆದೊಂದು ತಿಂಗಳಿನಿಂದ ಮಳೆಯಿಲ್ಲದೆ ತಂಬಾಕು, ಆಲೂಗಡ್ಡೆ, ಮುಸುಕಿನ ಜೋಳ ಹಾಗೂ ದ್ವಿದಳ ಧಾನ್ಯ ಬೆಳೆಗಳು ಹಾಳಾಗುವ ಹಂತ ತಲುಪಿದ್ದವು. ಇದರಿಂದ ಇಳುವರಿ ಕುಂಠಿತವಾಗಿ ನಷ್ಟ ಅನುಭವಿಸುವ ಆತಂಕ ಸೃಷ್ಟಿಯಾಗಿತ್ತು. ಇದೀಗ ಬಿದ್ದ ಮಳೆಗೆ ಬೆಳೆಗಳು ಚೇತರಿಸಿಕೊಳ್ಳುತ್ತಿದ್ದು ನಿಟ್ಟುಸಿರು ಬಿಡುವಂತಾಗಿದೆ ಎಂದು ರೈತರ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net