ಕಾವಲು ಬಸಪ್ಪನಿಗೆ ಗಂಗಾಭಿಷೇಕ ಉತ್ಸವ

dj nyk kavalu basappa
Published on

ನಾಯಕನಹಟ್ಟಿ: ಮಳೆಗಾಗಿ ಸಮೀಪದ ಮಾದಯ್ಯನಹಟ್ಟಿ ಬಳಿಯ ಕಾವಲು ಬಸವೇಶ್ವರ ಸ್ವಾಮಿಗೆ ಗುರುವಾರ ವಿಶೇಷ ಪೂಜೆ ಹಾಗೂ 108 ಗಂಗಾಭಿಷೇಕ ನೆರವೇರಿಸಲಾಯಿತು.

ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸದಲ್ಲಿ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳಮಠ ದೇವಾಲಯದಿಂದ ಪಟ್ಟದ ಅಲಂಕೃತ ಬಸವಣ್ಣನನ್ನು ದೇವಾಲಯದ ಧಾರ್ಮಿಕ ವಿಧಿ ವಿಧಾನಗಳಂತೆ ನಂದಿ ಧ್ವಜ, ಪಂಜು, ಮಂಗಳ ವಾಧ್ಯಗಳೊಂದಿಗೆ ಮಾದಯ್ಯನಹಟ್ಟಿ ಬಳಿಯಲ್ಲಿನ ಕಾವಲು ಬಸವೇಶ್ವರ ದೇಗುಲಕ್ಕೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.

ನಂತರ ಬಯಲು ಮಂಟಪದಲ್ಲಿನ ಬಸವಣ್ಣನ ಮೂರ್ತಿಗೆ 108 ಅಭಿಷೇಕಗಳನ್ನು ಸಲ್ಲಿಸಲಾಯಿತು. 108 ಬಿಂದಿಗೆ ನೀರಿನಿಂದ ನಂದಿ ಪ್ರತಿಮೆಗೆ ಅಭೀಷೇಕ ಮಾಡಲಾಯಿತು. ಪೂಜಾ ಕಾರ್ಯದ ನಂತರ ಅನ್ನ ಸಂತರ್ಪಣೆ ನೆರವೇರಿತು.

ಅರ್ಚಕ ಹಿರೇಮಠದ ಬಸವರಾಜ್, ಜಂಗಮಜ್ಯೋತಿ ತಿಪ್ಪೇಸ್ವಾಮಿ, ಪಪಂ ಸದಸ್ಯೆ ವಿನುತಾ, ಮಾಜಿ ಸದಸ್ಯ ಬಸಣ್ಣ, ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net