ಮಳೆಹಾನಿ ಕುರಿತು ಸಿಎಂಗೆ ವರದಿ ಸಲ್ಲಿಕೆ- ಸಚಿವ ಬಿ.ಸಿ.ಪಾಟೀಲ್ ಹೇಳಿಕೆ

211020 BC Patil Vist Flood Place
ಮಳೆಯಿಂದ ಹಾನಿಯಾಗಿರುವ ಕೊಪ್ಪಳ ತಾಲೂಕಿನ ಕೋಳೂರು ಬ್ರಿಡ್ಜ್‌ಕಂ ಬ್ಯಾರೇಜ್ ಹಾಗೂ ಅದರ ಯೋಜನಾ ವರದಿಯನ್ನು ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ವೀಕ್ಷಿಸಿದರು.
Published on

ಕೊಪ್ಪಳ: ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ವಾಸ್ತವಾಂಶದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಸಿಎಂಗೆ ವರದಿ ಸಲ್ಲಿಸಲಾಗುವುದೆಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಭರವಸೆ ನೀಡಿದರು.

ತಾಲೂಕಿನ ಕೋಳೂರಿನಲ್ಲಿ ಬೆಳೆಯಿಂದ ಹಾನಿಗೊಳಗಾದ ಬ್ರಿಡ್ಜ್ ವೀಕ್ಷಿಸಿ ಬುಧವಾರ ಮಾತನಾಡಿದರು. ಅತಿಯಾದ ಮಳೆಯಿಂದ ಬೆಳೆ ಹಾಗೂ ಮನೆಗಳು ಹಾನಿಯಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿಯೂ ಹೆಚ್ಚಿನ ಹಾನಿಯಾಗಿರುವುದರಿಂದ ನಾನೇ ಖುದ್ದಾಗಿ ಕೋಳೂರು ಬ್ರಿಡ್ಜ್ ಕಂ ಬ್ಯಾರೇಜ್, ಬನ್ನಿಕೊಪ್ಪ ಹಾಗೂ ಜಿಲ್ಲೆಯ ಇತರ ಪ್ರದೇಶಗಳ ವೀಕ್ಷಣೆ ಮಾಡಿ, ಹಾನಿ ಕುರಿತು ಪರಿಶೀಲಿಸುವೆ. ಸಂತ್ರಸ್ತರಿಗೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ನಿಯಮಗಳ ಪ್ರಕಾರ ಪರಿಹಾರ ನೀಡಲಾಗುತ್ತದೆ. ಕೋಳೂರು ಬ್ರಿಡ್ಜ್‌ನಲ್ಲಿ ಕಳಪೆ ಕಾಮಗಾರಿ ನಡೆದಿರುವ ಕುರಿತು ದೂರುಗಳಿದ್ದು, ಇಲಾಖೆಯಿಂದ ವರದಿ ಸಲ್ಲಿಸಲು ಸೂಚಿಸಿರುವೆ ಎಂದರು.

ಸಂಸದ ಸಂಗಣ್ಣ ಕರಡಿ, ಶಾಸಕ ಹಾಲಪ್ಪ ಆಚಾರ್, ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್, ಎಸ್ಪಿ ಟಿ.ಶ್ರೀಧರ, ಜಿಪಂ ಸಿಇಒ ರಘುನಂದನ್ ಮೂರ್ತಿ, ಎಸಿ ನಾರಾಯಣರಡ್ಡಿ ಕನಕರಡ್ಡಿ, ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್. ಕೊಪ್ಪಳ ತಹಸೀಲ್ದಾರ್ ಜೆ.ಬಿ.ಮಜ್ಗಿ, ಸಣ್ಣ ನೀರಾವರಿ ಇಲಾಖೆ ಇಇ ವಿನೋದ ಕುಮಾರ ಗುಪ್ತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net