ಭಾರಿ ಮಳೆ ಗದ್ದೆಗೆ ತುಂಬಿದ ನೀರು

gadde
Published on
ಯಲ್ಲಾಪುರ : ಭಾರಿ ಮಳೆಯಿಂದಾಗಿ ತಾಲೂಕಿನ ಬೊಂಡಕೇಸರದ ಗದ್ದೆ ಸಂಪೂರ್ಣ ಮುಳುಗಿ ಹೋಗಿದೆ. ಗದ್ದೆಯ ನಡುವಿ ಇದ್ದ ದಾರಿಯೂ ಮುಳುಗಿದ್ದು, ಗದ್ದೆಯ ಮೇಲ್ಭಾಗದಲ್ಲಿದ್ದ ಜಾಗವನ್ನು ಒತ್ತುವರಿ ಮಾಡಿ ಕಾಲುವೆಯ ಮಾರ್ಗವನ್ನು ಬದಲಿಸಿ ನೀರಿನ ಹರಿವಿನ ಗತಿಯನ್ನು ಬದಲಿಸಿದ್ದೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದೆ.
 ಮೊದಲು ಮಳೆ ಬಂದು ನೀರು ಬಂದರೂ ಕೆಲವೇ ಸಮಯದಲ್ಲಿ ಇಳಿದು ಹೋಗುತ್ತಿತ್ತು. ಒತ್ತುವರಿಯ ಕಾರಣ ಕೆರೆಗೆ ಹೋಗಬೇಕಾದ ನೀರು ಗದ್ದೆಗೆ ನುಗ್ಗುತ್ತಿದೆ. ದಾರಿಲ್ಲಿಯೂ ನೀರು ತುಂಬಿದ ಕಾರಣ ನಡೆದಾಡಲು ಅಸಾಧ್ಯವಾಗಿದೆ. ಭತ್ತ ಬೆಳೆಯಲೂ ತೊಂದರೆಯಾಗಿದೆ.
   ಹೀಗಾಗಿ ಒತ್ತುವರಿಯನ್ನು ತೆರವು ಪಡಿಸಿ, ನೀರಿನ ಕಾಲುವೆ ಸರಿ ಪಡಿಸಿ ಗದ್ದೆಗೆ ನೀರು ತುಂಬದಂತೆ ಮಾಡಬೇಕೆಂದು ಅರಣ್ಯ ಇಲಾಖೆಗೆ ಸ್ಥಳೀಯರಾದ ಕೇಶವ ಮರಾಠೆ ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net