ನಾಳೆಯಿಂದ ಮಳೆ ಇಳಿಮುಖ

Rain Report
Published on

ಕಾರವಾರ: ಕರಾವಳಿಯ ಕೆಲವೆಡೆ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಕಾರವಾರದಲ್ಲಿ ಭಾರಿ ಮಳೆಯಿಂದ ರಸ್ತೆಗಳಲ್ಲಿ ನೀರು ತುಂಬಿ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಮೇ 30 ರಂದು ಜಿಲ್ಲೆಯಲ್ಲಿ ಹದವಾಗಿ ಮಳೆಯಾಗಲಿದ್ದು, ಆರೇಂಜ್ ಅಲರ್ಟ್ ಘೋಷಿಸಲಾಗಿದೆ. 31 ಹಾಗೂ ಮೇ 2 ರವರೆಗೆ ಮಳೆ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬುಧವಾರ ರಾತ್ರಿಯಿಂದ ಶುರುವಾರ ಮಳೆ ಗುರುವಾರ ಮಧ್ಯಾಹ್ನದವರೆಗೂ ನಿರಂತರವಾಗಿ ಸುರಿಯಿತು. ಬೆಳಗ್ಗೆ ಕಚೇರಿಗಳಿಗೆ ಉದ್ಯೋಗಕ್ಕೆ ತೆರಳುವವರಿಗೆ ಸಮಸ್ಯೆ ಉಂಟಾಯಿತು. ಸದಾಶಿವಗಡ-ಕದ್ರಾ ರಸ್ತೆಯಲ್ಲಿ ಮುಡಗೇರಿ ಕ್ರಾಸ್ ಸೇರಿ ವಿವಿಧೆಡೆ ನೀರು ತುಂಬಿಕೊಂಡಿತ್ತು. ಕಾರವಾರ ನಗರದ ಫ್ಲೈ ಓವರ್ ಕೆಳಗಿನ ಸರ್ವೀಸ್ ರಸ್ತೆಯಲ್ಲಿ ನೀರು ತುಂಬಿತ್ತು. ಸಮುದ್ರದಲ್ಲಿ ಅಬ್ಬರದ ಅಲೆಗಳು ಏಳುತ್ತಿವೆ ಇದರಿಂದ ಬಂದರು ಇಲಾಖೆ ಸಮುದ್ರದ ನಡುವೆ ಅಳವಡಿಸಿದ್ದ, ಹಡಗುಗಳ ಮಾರ್ಗ ಗುರುತಿಸುವ ಬೋಯ್ ಆ್ಯಂಕರ್ ತುಂಡಾಗಿ ಟ್ಯಾಗೋರ್ ಕಡಲ ತೀರಕ್ಕೆ ಬಂದು ಬಿದ್ದಿತ್ತು. ಇದು ಇಲ್ಲದಿದ್ದಲ್ಲಿ ಹಡಗುಗಳು ಸರಿಯಾದ ಮಾರ್ಗದಲ್ಲಿ ಬಂದರಿಗೆ ತಲುಪಲು ಷ್ಟವಾಗಲಿದೆ.

ಗುರುವಾರ ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳ ಅವಽಯಲ್ಲಿ ಅಂಕೋಲಾದಲ್ಲಿ 67.7 ಮಿಮೀ, ಭಟ್ಕಳ-114.2, ಹಳಿಯಾಳ -2.6, ಹೊನ್ನಾವರ- 98.6, ಕಾರವಾರ- 58.2, , ಕುಮಟಾ- 71.5, ಮುಂಡಗೋಡ -6.2, ಸಿದ್ದಾಪುರ- 46.3 , ಶಿರಸಿ- 25.5,ಜೊಯಿಡಾ- 7.2 ಯಲ್ಲಾಪುರ- 13.9 ದಾಂಡೇಲಿ- 2.5ಮಿಮೀ ಮಳೆಯಾಗಿದೆ. ಮಳೆ ಸುರಿದಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 11 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net