ಇಂದೂ ಮಳೆಯ ಮುನ್ಸೂಚನೆ

Haliyal rain
Published on

ಕಾರವಾರ; ಶನಿವಾರ ಜಿಲ್ಲೆಯ ವಿವಿಧೆಡೆ ಮಳೆಯಾಗಿದ್ದು, ಭಾನುವಾರವೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಆದರೆ, ಸಾಯಂಕಾಲ 5.30 ರವರೆಗೆ ಎಲ್ಲೂ ಮಳೆಯಾಗಿಲ್ಲ.

ಮುಂದಿನ ಎರಡು ದಿನ ಭಾರಿ ಗಾಳಿ, ಸಿಡಿಲು, ಗುಡುಗಿನ ಜತೆ ಅಲ್ಲಲ್ಲಿ ಚದುರಿದಂತೆ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.‌

ಶನಿವಾರ ಜಿಲ್ಲೆಯ ಹಳಿಯಾಳ, ದಾಂಡೇಲಿ, ಶಿರಸಿ ಭಾಗಗಳಲ್ಲಿ ವ್ಯಾಪಕವಾಗಿ ಮಳೆಯಾಯಿತು. ಹಳಿಯಾಳದಲ್ಲಿ ಮಳೆಯಿಂದ ಸುಮಾರು ನಾಲ್ಕು ತಾಸು ವಿದ್ಯುತ್ ವ್ಯತ್ಯಯ ಉಂಟಾಯಿತು.

ಸುಮಾರು  4 ಗಂಟೆಯಿಂದಲೇ ವಿದ್ಯುತ್ ಕಡಿತ  ಉಂಟಾಗಿದ್ದು ಬಹುತೇಕ ಭಾಗದಲ್ಲಿ  ರಾತ್ರಿ 8.30 ಗಂಟೆಯಾದರೂ ವಿದ್ಯುತ್ ಸರಬರಾಜು ಇಲ್ಲದೇ ಜನ ಜೀವನ ಅಸ್ತವ್ಯಸ್ತವಾಗಿದ್ದು, ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದ ಜನತೆ ಕತ್ತಲಿನಲ್ಲಿ ಕಾಲ‌ಕಳೆಯಬೇಕಾದ ಸ್ಥಿತಿಕಂಡು ಬಂದಿತು..

ತಾಲೂಕಾ ಆಸ್ಪತ್ರೆಯಲ್ಲಿಯೂ ವಿದ್ಯುತ್  ಸಮಸ್ಯೆ ಮಾತ್ರವಲ್ಲದೇ ಜನರೇಟರ್  ಕೂಡ ಕೈ ಕೊಟ್ಟಿದ್ದರಿಂದ ಪ್ರಮುಖ ತುರ್ತು ಚಿಕಿತ್ಸಾ ಘಟಕ ಹೊರತು ಪಡಿಸಿ ಉಳಿದೆಲ್ಲ ವಾರ್ಡಗಳು ಕತ್ತೆಯಲ್ಲಿದ್ದವು. ರೋಗಿಗಳ ಆರೈಕೆಗೆ ಆಗಮಿಸಿರುವ ಕುಟುಂಬದ ಸದಸ್ಯರು ಮೊಬೈಲ್ ಟಾರ್ಚ್ ನ ಬೆಳಕಿನಲ್ಲಿಯೇ ಗಂಟೆಗಳ ಕಾಲ ಸಮಯ ಕಳೆಯಬೇಕಾದ ದುಸ್ಥಿತಿ ತಾಲೂಕಾ ಆಸ್ಪತ್ರೆಯಲ್ಲಿ ಕಂಡು ಬಂದಿತು.

ಪಟ್ಟಣದ ಪೇಟೆ ಬಸವೇಶ್ವರ ದೇವರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಮಹಾ ರಥೋತ್ಸವ ಸಂದರ್ಭದಲ್ಲಿ ‌ಆಗಮಿಸಿದ ಭಾರಿ ಮಳೆಯಲ್ಲಿಯೇ  ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತ ವೃಂದ ಮಳೆಯಲ್ಲಿಯೇ ಕುಣಿದು  ಕುಪ್ಪಳಿಸಿದ್ದು ಭಾರಿ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net