

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಮಳೆರಾಯನ ಮೂರ್ತಿ ನಿರ್ಮಿಸಿ ಮೆರವರಣಿ ಮಾಡುವ ಮೂಲಕ ಹಲಸಹಳ್ಳಿಯ ಮಕ್ಕಳು ಮಳೆಗಾಗಿ ಪ್ರಾರ್ಥಿಸಿದರು.
ಬರಗಾಲದಲ್ಲಿ ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣ ಆದಾಗಲೆಲ್ಲ ಕಪ್ಪೆಗಳಿಗೆ ಮದುವೆ ಮಾಡಿಸುವುದು, ಮಳೆರಾಯನ ಮೂರ್ತಿ ನಿರ್ಮಿಸಿ ನೀರು ಸುರಿಯುವ ಸಂಪ್ರದಾಯಗಳು ನಶಿಸುತ್ತಿರುವ ನಡುವೆ ಹಲಸಹಳ್ಳಿ ಗ್ರಾಮಸ್ಥರು ಮಳೆರಾಯನ ಆರಾಧನೆ ಮಾಡಿ ಗಮನ ಸೆಳೆದಿದ್ದಾರೆ.
ಮಳೆರಾಯಣ ಮಣ್ಣಿನ ಮೂರ್ತಿ ಮಾಡಿ, ಮನೆ ಮನೆಗೆ ಮೆರವಣಿಗೆ ತೆರಳಿ, ಪ್ರತಿ ಮನೆಯಿಂದ ಒಂದು ಬಿಂದಿಗೆ ನೀರನ್ನು ಮಳೆ ರಾಯನ ಮೂರ್ತಿಗೆ ಸುರಿದು, ಉಯ್ಯೋ ಉಯ್ಯೋ ಮಳೆರಾಯ ಊರಿಗೆ, ಜನರಿಗೆ ಪಶುವಿಗೆ ನೀರಿಲ್ಲ ಎಂಬ ೋಷಣೆಗಳನ್ನು ಕೂಗಿ ಪ್ರಾರ್ಥಿಸಿದರು.
ಗ್ರಾಪಂ ಸದಸ್ಯ ನಾರಾಯಣಮ್ಮ, ಚಂದ್ರಶೇಖರ, ಯಜಮಾನ್ ಕೃಷಪ್ಪ, ರೈತರಾದ ನಾರಾಣಪ್ಪ, ನಾಣಿ, ಶೀಗಡಿಯಪ್ಪ, ಮಧು, ಲಕ್ಷ್ಮಮ್ಮ ಇತರರು ಇದ್ದರು.
ಮಕ್ಕಳು ದೇವರ ಸಮಾನ, ಬೇಸಿಗೆಯ ಬಿಸಿಲಿನ ತಾಪದಿಂದ ಅಂತರ್ಜಲ ಕುಸಿಯುತಿದ್ದು, ಕೆರೆ-ಕುಂಟೆಗಳಲ್ಲಿ ನೀರು ಬತ್ತಿಹೋಗಿ, ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರಿಲ್ಲ. ಇಂತಹ ಸಂದರ್ಭದಲ್ಲಿ ಗ್ರಾಮದ ಮಕ್ಕಳು ಮಳೆರಾಯನನ್ನು ಹೊತ್ತು ಮನೆಮನೆ ತೆರಳಿ ನೀರು ಸುರಿಸಿಕೊಂಡು ಮಳೆಗಾಗಿ ಪ್ರಾರ್ಥಿಸಿದ್ದಾರೆ, ಮಳೆರಾಯನಿಗೆ ಕರುಣೆ ಉಂಟಾಗಿ ಮಳೆ ಸುರಿಸುತ್ತಾನೆಂಬ ನಂಬಿಕೆಯಿಂದೆ.
ಸುಬ್ಬುಲಕ್ಷ್ಮೀ ಚಿಕ್ಕನಾರಾಯಣಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ