ಜಿಟಿಜಿಟಿ ಮಳೆಯಿಂದ ವಿದ್ಯಾರ್ಥಿಗಳ ಪರದಾಟ

24.ktal.01
Published on

ಕವಿತಾಳ: ಕಳೆದ ಕೆಲ ದಿನಗಳಿಂದ ಜಿಟಿಜಿಟಿ ಮಳೆ ಬರುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಹೋಬಳಿ ವ್ಯಾಪ್ತಿಯ ಗ್ರಾಮಸ್ಥರು ದೈನಂದಿನ ಕೆಲಸಗಳಿಗಾಗಿ ಪಟ್ಟಣಕ್ಕೆ ಬಂದು ಹೋಗಲು ಸಮಸ್ಯೆ ಎದುರಿಸುತ್ತಿದ್ದಾರೆ. ಜಿಟಿಜಿಟಿ ಮಳೆಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಸೋಮವಾರ ಪರದಾಡಿದರು. ಮಳೆ ರೈತರಲ್ಲಿ ಸಂಭ್ರಮ ಉಂಟು ಮಾಡಿದ್ದರೂ, ಸೂರ್ಯಕಾಂತಿ ಬೆಳೆಗೆ ಮಾರಕವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net