ಗುಡ್ಡೆ ಜರಿದು ತೋಡು ಬ್ಲಾಕ್

PTR_3 AUG_6
Published on


ಪುತ್ತೂರು: ನಗರದ ಹಾಗೂ ಅಕ್ಕಪಕ್ಕದ ಊರುಗಳಿಂದ ನೀರು ಹರಿದು ನದಿ ಸೇರುವ ಬೆದ್ರಾಳ ತೋಡಿಗೆ ಕೆಮ್ಮಿಂಜೆ ಗ್ರಾಮದ ಪುತ್ತೂರ ಮೂಲೆ ಮತ್ತು ಕೆಮ್ಮಿಂಜೆ ಬೈಲು ಎಂಬಲ್ಲಿ ಗುಡ್ದ ಕುಸಿತವಾಗಿ ಅಡಕೆ ತೋಟ ಜಲಾವೃತವಾಗಿದೆ.


ಸುಬ್ರಹ್ಮಣ್ಯ ಬಳ್ಳಕ್ಕುರಾಯ, ಸಚಿನ್, ಮುತ್ತು ಶೆಟ್ಟಿ ಎಂಬವರ ತೋಟಗಳು ನೀರಿನಿಂದ ತುಂಬಿಕೊಂಡಿದೆ. ತೋಡಿನ ಬದಿಯಲ್ಲಿರುವ ಯಶೋಧರ ಅವರ ಮನೆ ಅಪಾಯದಲ್ಲಿದೆ. ಗುಡ್ಡ ಜರಿದು ತೋಡು ಮುಚ್ಚಿದ್ದು, ಮಣ್ಣು ತೆರವು ಮಾಡಲು ಯಂತ್ರಗಳು ಸ್ಥಳಕ್ಕೆ ಹೋಗಲಾದ ಸ್ಥಿತಿಯಿದೆ. ಸ್ಥಳಕ್ಕೆ ಶಾಸಕ ಅಶೋಕ್ ಕುಮಾರ್ ರೈ, ನಗರಸಭಾ ಸದಸ್ಯ ಬಾಲಚಂದ್ರ, ಪೌರಾಯುಕ್ತ ಮಧು ಎಸ್. ಮನೋಹರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net