ಮಳೆಗೆ ಜನಜೀವನ ಅಸ್ತವ್ಯಸ್ತ

21 KST 03
ಕುಷ್ಟಗಿಯಲ್ಲಿ ಭಾನುವಾರ ಸುರಿದ ಮಳೆ ವಾರದ ಸಂತೆಗೆ ಅಡ್ಡಿಯನ್ನುಂಟು ಮಾಡಿತು.
Published on

ಕುಷ್ಟಗಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಭಾನುವಾರ ಇಡೀ ದಿನ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿತು.

ಬೆಳಗ್ಗೆ ಜಿಟಿ ಜಿಟಿಯಾಗಿ ಶುರುವಾಗಿ ಮಧ್ಯಾಹ್ನದ ಹೊತ್ತಿಗೆ ಜೋರಾಗಿ ಸುರಿಯಲಾರಂಭಿಸಿತು. ಸಂಜೆವರೆಗೆ ಮುಂದುವರಿದ ಮಳೆಯಿಂದ ದೈನಂದಿನ ಚಟುವಟಿಕೆಗಳಿಗೆ ಅಡ್ಡಿ ಉಂಟಾಯಿತು.

ಪಟ್ಟಣದಲ್ಲಿ ನಡೆದ ವಾರದ ಸಂತೆಗೂ ಮಳೆ ಅಡ್ಡಿಪಡಿಸಿದ್ದರಿಂದ ವಿವಿಧ ವ್ಯಾಪಾರಿಗಳು ಗ್ರಾಹಕರಿಲ್ಲದೆ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net