ತರೀಕೆರೆಯಲ್ಲಿ ರಾತ್ರಿಯಿಡೀ ಮಳೆ

TKE house
ಉಡೇವಾ ಗ್ರಾಮದಲ್ಲಿ ಮನೆ ಗೋಡೆ ಕುಸಿದಿರುವುದು.
Published on

ತರೀಕೆರೆ: ಪಟ್ಟಣ ಹಾಗೂ ವಿವಿಧ ಗ್ರಾಮಗಳಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನ ಜಾವದವರೆಗೂ ಭರ್ಜರಿ ಮಳೆಯಾಗಿದೆ.

ಕೆರೆಹೊಸಳ್ಳಿ, ಉಡೇವಾ, ಲಿಂಗದಹಳ್ಳಿ, ವಿಠ್ಠಲಾಪುರ, ಅಮೃತಾಪುರ, ಹಾದಿಕೆರೆ, ಲಕ್ಷ್ಮೀಸಾಗರ, ಕುಂಟಿನಮಡು, ನಾಗೇನಹಳ್ಳಿ, ಪಿರಮೇನಹಳ್ಳಿ, ಯರೇಹಳ್ಳಿ, ದೋರನಾಳು, ಕಟ್ಟೆಹೊಳೆ, ಹಳಿಯೂರು, ಇಟ್ಟಿಗೆ, ಲಕ್ಕೇನಹಳ್ಳಿ, ಹಿರೇಕಾತೂರು, ಎಚ್.ತಿಮ್ಮಾಪುರ, ಬೇಲೇನಹಳ್ಳಿ, ಬೇಲೇನಹಳ್ಳಿ ತಾಂಡ, ಎ.ರಂಗಾಪುರ, ಎ. ಮತ್ತು ಬಿ.ರಾಮನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಸೋಮವಾರ ಸಂಜೆ ಗುಡುಗು ಆರ್ಭಟದೊಂದಿಗೆ ಆರಂಭವಾದ ಮಳೆ ಮಂಗಳವಾರ ಬೆಳಗಿನ ಜಾವದವರೆಗೆ ಬಿಟ್ಟು ಬಿಟ್ಟು ಸುರಿಯಿತು.
ಹದ ಮಳೆಗೆ ವಿವಿಧ ಗ್ರಾಮಗಳ ಹೊಲ, ಗದ್ದೆಗಳಲ್ಲಿ ನೀರು ಹರಿಯಿತು. ದೋರನಾಳು ಗ್ರಾಮದ ಮನೆಯೊಂದಕ್ಕೆ ನೀರು ನುಗ್ಗಿತು. ವಿಠ್ಠಲಾಪುರದ ಶಾರದಮ್ಮ ಮತ್ತು ಉಡೇವಾ ಗ್ರಾಮದ ಸುಜಾತಮ್ಮ ಎಂಬುವವರ ಮನೆ ಗೋಡೆ ಕುಸಿದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net