ನಾಪೋಕ್ಲುವಿನಲ್ಲಿ ಮಳೆ

.npk..4 RAIN
Published on

ನಾಪೋಕ್ಲು: ಪಟ್ಟಣ ವ್ಯಾಪ್ತಿಯಲ್ಲಿ ಮಂಗಳವಾರಸಂಜೆ ಮಳೆ ಮಳೆಯಾಗಿದೆ. ಸುಮಾರು 15 ನಿಮಿಷಗಳ ಕಾಲ ಸುರಿದ ಮಳೆ ಒಣಗಿದ ನೆಲಕ್ಕೆ ತಂಪೆರೆಯಿತು. ಪಟ್ಟಣ ಸೇರಿದಂತೆ ಹಳೆಯ ತಾಲೂಕು, ಎಮ್ಮೆಮಾಡು ,ಬಲ್ಲಮಾವಟ್ಟಿ , ನೆಲಜಿ ,ಕೊಳಕೇರಿ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ 10ರಿಂದ 40.ಸೆಂ ಮೀ ಮಳೆಯಾಗಿದೆ. ಬಲ್ಲಮಾವಟ್ಟಿ ವ್ಯಾಪ್ತಿಯಲ್ಲಿ ಬಿಸಿಲ ತಾಪಕ್ಕೆ ಕಾಫಿ ಗಿಡದಲ್ಲಿ ಹೂಗಳು ಒಣಗಿ ಕೆಂಪಗಾಗಿದ್ದು, ಬೆಳೆಗಾರರು ಆಂತಂಕದಲ್ಲಿ ಇದ್ದರು. ವಾರದ ಹಿಂದೆ ಬಲ್ಲಮಾವಟಿ, ಪೇರೂರು ಗ್ರಾಮ ವ್ಯಾಪ್ತಿಗಳಲ್ಲಿ ಮಳೆಯಾಗಿತ್ತು. ಮಂಗಳವಾರ ಸುರಿದ ಮಳೆಯಿಂದ ಸ್ವಲ್ಪ ಮಟ್ಟಿಗೆ ಭೂಮಿ ತಂಪಾಗಿದ್ದು, ಕಾಫಿ ಬೆಳೆಗಾರರು ನಿಟ್ಟುಸಿರು ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net