ನಿರಂತರ ಮಳೆ; ಕುರುಗೋಡಿನಲ್ಲಿ ವಿದ್ಯುತ್ ಸಂಪರ್ಕ ಕಡಿತ

s_636777717725693583_Power_Cut
Published on

ಕುರುಗೋಡು: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ಬುಧವಾರ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

110 ಕೆವಿ ವಿತರಣಾ ಕೇಂದ್ರದಿಂದ ಬೆಳಗ್ಗೆ 9 ಗಂಟೆಗೆ ಪವರ್ ಕಟ್ ಮಾಡಿ 11 ಗಂಟೆಗೆ ನೀಡಲಾಯಿತು. ಕೆಲ ಹೊತ್ತಿನಲ್ಲೇ ಸಂಪರ್ಕ ಕಡಿತಗೊಳಿಸಲಾಯಿತು. ಸಂಜೆ 6:30 ನಂತರ ವಿದ್ಯುತ್ ಸರಬರಾಜು ಮಾಡಲಾಯಿತು. ಕರೆಂಟ್ ಕಣ್ಣಾಮುಚ್ಚಾಲೆಯಿಂದ ಕಚೇರಿ ಹಾಗೂ ಮನೆ, ವ್ಯಾಪಾರ, ವಹಿವಾಟಿಗೆ ಸಂಬಂಧಿಸಿದ ಕೆಲಸಗಳಿಗೆ ಅಡಚಣೆಯಾಯಿತು.

ಆನ್‌ಲೈನ್ ಕೇಂದ್ರಗಳಲ್ಲಿ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಬಂದ ಜನರಿಗೆ ಕರೆಂಟ್ ಇಲ್ಲ ಎಂದು ಹೇಳಿ ಕಳಿಸುತ್ತಿರುವುದು ಸಾಮಾನ್ಯವಾಗಿತ್ತು. ವಿದ್ಯುತ್ ವ್ಯತ್ಯಯ ಕುರಿತು ಜೆಸ್ಕಾಂ ಅಧಿಕಾರಿಗಳು ಒಂದೆರಡು ದಿನ ಮುಂಚೆಯೇ ತಿಳಿಸಬೇಕು ಎಂಬುದು ಜನರ ಒತ್ತಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net