ಜಿಲ್ಲೆಯಲ್ಲಿ ಐದು ದಿನ ತುಂತುರು ಮಳೆ: ಜು.28ರಿಂದ ಏಳು ದಿನ ಸರಾಸರಿ ಮಳೆ ನಿರೀಕ್ಷೆ

Rain
Transparent umbrella under heavy rain against water drops splash background. Rainy weather concept.
Published on

ಮಂಡ್ಯ: ಜಿಲ್ಲೆಯಲ್ಲಿ ಜು.22ರಿಂದ 26ರವರೆಗೆ ಮೋಡ ಕವಿದ ವಾತಾವರಣದ ಜತೆಗೆ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಅಂತೆಯೇ ದೀರ್ಘಾವಧಿ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಜು.28ರಿಂದ ಆ.3ರವರೆಗೆ ಸರಾಸರಿ ಮಳೆಯಾಗುವ ಸಂಭವವಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಭಾರತೀಯ ಹವಾಮಾನ ಇಲಾಖೆ ವರದಿಯಂತೆ ಮಾಹಿತಿ ನೀಡಿರುವ ಮೈಸೂರು ನಾಗನಹಳ್ಳಿ ಗ್ರಾಮೀಣ ಕೃಷಿ ವಿಭಾಗ, ಪ್ರತಿ ಗಂಟೆಗೆ 4 ರಿಂದ 5 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಗರಿಷ್ಟ 30 ಡಿಗ್ರಿ ಹಾಗೂ ಕನಿಷ್ಟ 22 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಲಿದೆ. ಇನ್ನು ಮಳೆಯ ಅಭಾವವಿರುವ ಹಿನ್ನೆಲೆಯಲ್ಲಿ ಮಿತ ನೀರು ಬಳಕೆ ಮಾಡಿಕೊಂಡು ಕೃಷಿ ಮಾಡಬೇಕು. ಈ ನಿಟ್ಟಿನಲ್ಲಿ ಮಧ್ಯಮಾವಧಿ ಭತ್ತವನ್ನು ತಳಿಯನ್ನು ಶ್ರೀ ಪದ್ಧತಿ/ಡ್ರಮ್ ಸೀಡರ್ ಅನುಸರಿಸಿ ಕೃಷಿ ಮಾಡಬಹುದು. ಅಂತೆಯೇ ಅಲ್ಪಾವಧಿ ರಾಗಿ ತಳಿಯನ್ನು ಬೆಳೆಯಬೇಕು. ಬೆಂಡೆ ಹಾಗೂ ಹುರುಳಿಕಾಯಿ ಬೆಳೆಯಬಹುದೆಂದು ಸಲಹೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net