ಫೆ.2ರಿಂದ ರಾಜ್ಯದಲ್ಲಿ ಮಳೆ: 13 ಜಿಲ್ಲೆಗಳಲ್ಲಿ ಉಷ್ಣಾಂಶ ಕುಸಿತದಿಂದ ಇನ್ನಷ್ಟು ತೀವ್ರ ಚಳಿ

rain alert
Published on

ಬೆಂಗಳೂರು: ರಾಜ್ಯದಲ್ಲಿ ಫೆ.2ರಿಂದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಬೆಂಗಳೂರು ನಗರ, ಬೆಂ.ಗ್ರಾಮಾಂತರ, ರಾಮನಗರ,ಮಂಡ್ಯ, ಮೈಸೂರು,ಚಾಮರಾಜನಗರ, ದಕ್ಷಿಣ ಕನ್ನಡದಲ್ಲಿ ಫೆ.2ರಿಂದ 3ರವರೆಗೆ, ಉಡುಪಿ, ಚಿಕ್ಕಮಗಳೂರು,ಕೊಡಗು, ಹಾಸನದಲ್ಲಿ ಫೆ.3ರಂದು ಸಾಧಾರಣ ಮಳೆಯಾಗಲಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಉಷ್ಣಾಂಶ ಕುಸಿತ: 13 ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಸೋಮವಾರ ಉಷ್ಣಾಂಶ ದಿಢೀರ್​ ಕುಸಿತವಾಗಿದ್ದು, ಥಂಡಿ ವಾತಾವರಣ ಮುಂದುವರಿದಿದೆ. ಚಿಂತಾಮಣಿ 10.3, ಹಾಸನ 10.4, ಚಿಕ್ಕಮಗಳೂರು 10.4, ದಾವಣಗೆರೆ 10.5, ಚಾಮರಾಜನಗರ 11, ಆಗುಂಬೆ 11, ಮಡಿಕೇರಿ 11.7, ಮಂಡ್ಯ 12, ಶಿವಮೊಗ್ಗ 12.2, ಮೈಸೂರು 12.4, ಬೀದರ್​, 12.5, ಬೆಳಗಾವಿ ವಿಮಾನ ನಿಲ್ದಾಣ 13 ಡಿ.ಸೆ.ಉಷ್ಣಾಂಶ ದಾಖಲಾಗಿದೆ. ಎಲ್ಲ ಜಿಲ್ಲೆಗಳಲ್ಲಿ ವಾಡಿಕೆಗಿಂತ 3ರಿಂದ 5 ಡಿ.ಸೆ.ಉಷ್ಣಾಂಶ ಕುಸಿತವಾಗಿದೆ.

ಹಲವು ಪ್ರದೇಶಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು ಬೀಳುತ್ತಿದೆ. ಫೆಬ್ರವರಿ ಮೊದಲ ವಾರದಿಂದ ಚಳಿ ಇಳಿಮುಖವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net