ಮರ ಬಿದ್ದು ಮನೆ ಛಾವಣಿ ಹಾನಿ

16sunti02
Published on

ಸುಂಟಿಕೊಪ್ಪ: ಗಾಳಿ, ಮಳೆ ಹಿನ್ನೆಲೆಯಲ್ಲಿ ಕಾಫಿ ತೋಟದಲ್ಲಿ ಮರ ಬಿದ್ದ ಪರಿಣಾಮ ಮನೆಯ ಛಾವಣಿ ಹಾಗೂ ಗೃಹ ಉಪಯೋಗಿ ವಸ್ತುಗಳು ಹಾನಿಯಾಗಿದ್ದು, ವೃದ್ಧೆಯೊಬ್ಬರು ಗಾಯಗೊಂಡಿದ್ದಾರೆ.

ಎಮ್ಮೆಗುಂಡಿ ನಿವಾಸಿ ದೇವರಾಜ್ ಅವರ ಮನೆಯ ಮೇಲೆ ಮಂಗಳವಾರ ಮರವೊಂದು ಗಾಳಿ, ಮಳೆಗೆ ಬುಡಸಮೇತ ಬಿದ್ದಿದ್ದು, ಗಂಗಮ್ಮ (65) ಗಾಯಗೊಂಡಿದ್ದಾರೆ. ಛಾವಣಿ, ವಸ್ತುಗಳು ಹಾನಿಗೀಡಾಗಿವೆ. ಸ್ಥಳಕ್ಕೆ ಸುಂಟಿಕೊಪ್ಪ ಕಂದಾಯ ಪರಿವೀಕ್ಷಕ ಪ್ರಶಾಂತ್, ಗ್ರಾ.ಪಂ. ಸದಸ್ಯ ಪ್ರಸಾದ್ ಕುಟ್ಟಪ್ಪ ಹಾಗೂ ಇತರ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net