ಅಂತೂ ಕೃಪೆ ತೋರಿದ ವರುಣ

RAIN
Published on

ರೋಣ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಸೋಮವಾರ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆಯಾಗಿದ್ದು ಅನ್ನದಾತರ ಮೊಗದಲ್ಲಿ ಸಂತಸ ಮೂಡಿಸಿದೆ.

ಬಾಸಲಾಪೂರ, ಕೊತಬಾಳ, ಹಿರೇಹಾಳ, ಮುಗಳಿ, ಹಿರೇಮಣ್ಣೂರ, ಅರಹುಣಸಿ, ಚಿಕ್ಕಮಣ್ಣೂರ, ಹೊಸಳ್ಳಿ, ಸವಡಿ, ಹೊನ್ನಾಪೂರ, ಮಲ್ಲಾಪೂರ, ಸಂದಿಗವಾಡ, ಜಿಗಳೂರ, ಕೌಜಗೇರಿ, ಹುಲ್ಲೂರ, ಮುದೇನಗುಡಿ, ಹೊನ್ನಿಗನೂರ, ಇಟಗಿ, ಕುರಬನಾಳ ಸೇರಿದಂತೆ ವಿವಿಧೆಡೆ ಉತ್ತಮ ಮಳೆಯಾಗಿದೆ.

ಮುಂಗಾರನ್ನೇ ನಂಬಿಕೊಂಡು ಬಿತ್ತನೆ ಮಾಡಲಾದ ಹೆಸರು ಬೆಳೆ ತೇವಾಂಶ ಕೊರತೆಯಿಂದ ಸಂಪೂರ್ಣ ಹಾಳಾಗಿದೆ. ಕೆಲ ರೈತರು ಹೆಸರು ಬೆಳೆ ಹರಗಿ, ಉಳ್ಳಾಗಡ್ಡಿ, ಮೆಣಸಿನಕಾಯಿ, ಹತ್ತಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ರೈತರಿಗೆ ವರುಣದೇವ ಕೃಪೆ ತೋರಿದ್ದು ಸಮಾಧಾನ ಮೂಡಿಸಿದೆ. ಆದರೆ, ಇನ್ನೂ ಮೂರ‌್ನಾಲ್ಕು ದಿನಗಳಲ್ಲಿ ಮೇಲಿಂದ ಮೇಲೆ ಇದೇ ರೀತಿ ಉತ್ತಮವಾಗಿ ಮಳೆ ಸುರಿದರೆ ಮಾತ್ರ ಭೂಮಿ ಹಸಿಯಾಗಿ ಬಿತ್ತನೆಗೆ ಅನುಕೂಲವಾಗಲಿದೆ ಎನ್ನುತ್ತಾರೆ ತಾಲೂಕಿನ ರೈತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net