ನಗರದಲ್ಲಿ ಆರ್ಭಟಿಸಿದ ಮುಂಗಾರು

Rain mysore
Published on

ಮೈಸೂರು: ನಗರದಲ್ಲಿ ಶನಿವಾರ ಸಂಜೆ ಮುಂಗಾರು ಆರ್ಭಟಿಸಿತು. ಅರ್ಧ ತಾಸು ಧಾರಾಕಾರ ಸುರಿದ ಮಳೆಯಿಂದ ನಗರದಲ್ಲಿ ತಣ್ಣನೆಯ ವಾತಾವರಣ ನಿರ್ಮಾಣವಾಯಿತು.

ನಗರದಲ್ಲಿ ಸಂಜೆವರೆಗೂ ಬಿಸಿಲಿನ ವಾತಾವರಣ ಬಂದಿತ್ತು. ಆದರೆ, ದಿಢೀರಾಗಿ ಸಂಜೆ 5ಕ್ಕೆ ಮಳೆ ಸುರಿಯಲು ಪ್ರಾರಂಭಿಸಿತು. 5.30ರವರೆಗೆ ಧಾರಾಕಾರ ಮಳೆ ಸುರಿತು. ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಜನರು ಒಂದೆಡೆಯಿಂದ ಮತ್ತೊಂದೆಡೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.

ಕಳೆದ ಶನಿವಾರ ನಗರದಲ್ಲಿ ಉತ್ತಮ ಮಳೆಯಾಗಿತ್ತು. ಆ ನಂತರ ಇದೀಗ ಮತ್ತೆ ಮಳೆ ಆರ್ಭಟಿಸಿರುವುದು ಎಲ್ಲರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net