

ಮಂಗಳೂರು/ಉಡುಪಿ: ಸದ್ಯದ ಹವಾಮಾನ ಮುನ್ಸೂಚನೆಯಂತೆ ದುರ್ಬಲವಾಗಿರುವ ಮುಂಗಾರು ಇನ್ನು ಎರಡು ಮೂರು ದಿನದಲ್ಲಿ ಮತ್ತೆ ಚುರುಕಾಗುವ ಸಾಧ್ಯತೆಯಿದೆ. ಅದರಂತೆ ಕರಾವಳಿಯಲ್ಲಿ ಜುಲೈ 7ರಿಂದ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಈ ನಡುವೆ ಭಾನುವಾರ ದ.ಕ. ಜಿಲ್ಲೆಯಲ್ಲಿ ಮೋಡ ಕವಿದ ಬಿಸಿಲ ವಾತಾವರಣವಿತ್ತು. ಮುಂಜಾನೆ ವೇಳೆ ಅಲ್ಲಲ್ಲಿ ಸ್ವಲ್ಪ ಮಳೆಯಾಗಿದ್ದು, ಸಾಯಂಕಾಲ ಘಟ್ಟದ ತಪ್ಪಲಿನ ಭಾಗದಲ್ಲಿ ಮಳೆ ಸುರಿದಿದೆ. ಹಗಲು ವೇಳೆ ಬಿಸಿಲೇ ಹೆಚ್ಚು. ಉಡುಪಿ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಸಾಧರಣ ಮಳೆಯಾಗಿದ್ದು, ಭಾನುವಾರ ಹಗಲು ಬಿಸಿಲು ವಾತಾವರಣದ ನಡುವೆ ಸಣ್ಣದಾಗಿ ಮಳೆಯಾಗಿದೆ. ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 3 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.