ಮಳೆ ಆರ್ಭಟಕ್ಕೆ ಹಾರಿದ ಚಾವಣಿ

25 kkr1(5-24
ಕಿಕ್ಕೇರಿ ಸಮೀಪದ ಹೆಗ್ಗಡಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಸುರಿದ ಬಿರುಗಾಳಿ ಮಳೆಗೆ ರೇಖಾ ಚಂದ್ರು ಅವರ ಕೊಟ್ಟಿಗೆ ಚಾವಣಿ ಹಾರಿರುವುದು.
Published on

ಕಿಕ್ಕೇರಿ: ವಾರದಿಂದ ನಿರಂತರವಾಗಿ ಸುರಿಯುತ್ತ್ತಿರುವ ಮಳೆಗೆ ಹೋಬಳಿಯಾದ್ಯಂತ ಬಹಳಷ್ಟು ಮನೆಗಳು ಶಿಥಿಲಗೊಂಡು ಬೀಳುವ ಹಂತ ತಲುಪಿವೆ.

ಮಳೆ ಜತೆಗೆ ಬಿರುಗಾಳಿ ಬೀಸುತ್ತಿರುವುದರಿಂದ ಬಹುತೇಕ ಮನೆಯ ಚಾವಣಿ ಹಾರಿ ಹೋಗುತ್ತಿವೆ. ಶುಕ್ರವಾರ ರಾತ್ರಿ ಸುರಿದ ಬಿರುಗಾಳಿ ಮಳೆಗೆ ಹೆಗ್ಗಡಹಳ್ಳಿ ಗ್ರಾಮದ ರೇಖಾ ಚಂದ್ರು ಅವರ ಕೊಟ್ಟಿಗೆಗೆ ಹಾಕಲಾಗಿದ್ದ ಸಿಮೆಂಟ್ ಶೀಟುಗಳು ಹಾರಿ ಹೋಗಿವೆ. ಈ ಶೀಟುಗಳ ಪಕ್ಕದ ಮನೆಯ ಮೇಲೆ ಬಿದ್ದಿದ್ದರಿಂದ ಆ ಮನೆಗೂ ಹಾನಿಯಾಗಿದೆ.

ಹೆಗ್ಗಡಹಳ್ಳಿ ಹಾಗೂ ಮಲ್ಲೇನಹಳ್ಳಿ ಗ್ರಾಮಕ್ಕೆ ಸಂಪರ್ಕವಾಗಿದ್ದ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರ ಬಿರುಗಾಳಿ ಉರುಳಿದೆ. ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಸ್ಥರ ಸಹಕಾರದಲ್ಲಿ ರಸ್ತೆಗೆ ಅಡ್ಡಲಾಗಿದ್ದ ಮರವನ್ನು ತೆರವುಗೊಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net