ಕಿಗ್ಗಾಲು ಭಾಗದಲ್ಲಿ ಮಳೆ

Rain in Kigali
Published on

ಮಡಿಕೇರಿ

ಜಿಲ್ಲೆಯ ಕೆಲವು ಭಾಗಗಳಲ್ಲಿ ಬುಧವಾರ ಮಳೆಯಾಗಿದೆ. ಮೂರ್ನಾಡು ವ್ಯಾಪ್ತಿಯ ಕಿಗ್ಗಾಲು ಭಾಗದಲ್ಲಿ ಸಾಧಾರಣ ಮಳೆ ಸುರಿದಿದೆ. ಮಡಿಕೇರಿ ಸೇರಿದಂತೆ ಜಿಲ್ಲೆಯ ಹಲವೆಡೆ ಮೋಡ ಕವಿದ ವಾತಾವರಣ ಇದ್ದು, ಇನ್ನು 2-3 ದಿನಗಳಲ್ಲಿ ಮಳೆಯಾಗುವ ರೀತಿಯ ಲಕ್ಷಣಗಳು ಕಂಡು ಬರುತ್ತಿದೆ. ಕಾಫಿ, ಕರಿಮೆಣಸು ಸೇರಿದಂತೆ ರೈತರ ಬೆಳೆಗಳಿಗೆ ಈಗ ಮಳೆಯ ಅಗತ್ಯವಿದ್ದು ರೈತರು ಕೃತಕ ನೀರಾವರಿಯ ಮೊರೆ ಹೋಗಿದ್ದಾರೆ. ಸೆಕೆಯ ವಾತಾವರಣ ತಣಿಸಲು ಕೂಡ ಈಗ ಮಳೆ ಬೇಕಾಗಿದೆ. ಭಾರತೀಯ ಹವಾಮಾನ ಇಲಾಖೆ ಮೂಲಗಳ ಪ್ರಕಾರ ಮಾ. 17ರ ತನಕ ಸ್ವಚ್ಛ ವಾತಾವರಣವಿದ್ದು, ಮಳೆ ಬರುವ ಸಂಭವ ಇಲ್ಲ ಎಂದು ಹೇಳಲಾಗಿದೆ. ಗರಿಷ್ಠ ಉಷ್ಣಾಂಶ 33-34 ಡಿಗ್ರಿ ಸೆಂಟಿಗ್ರೇಡ್ ಮತ್ತು ಕನಿಷ್ಢ ಉಷ್ಣಾಂಶ 21-22 ಡಿಗ್ರಿ ಸೆಂಟಿಗ್ರೇಡ್ ದಾಖಲಾಗುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net