ಕಲಬುರಗಿಯಲ್ಲಿ ಅಕಾಲಿಕ ಮಳೆ, ಸಿಡಿಲಿಗೆ ರೈತ ಬಲಿ

IMG-20230407-WA0010
Published on

ಕಲಬುರಗಿ: ನಗರ ಮತ್ತು ಜಿಲ್ಲೆಯ ಎಲ್ಲಡೆ ಶುಕ್ರವಾರ ನಸುಕಿನ ಜಾವದಿಂದ ಗುಡುಗು ಮಿಂಚು ಸಹಿತ ಮಳೆಯಾಗುತ್ತಿದೆ. ಶನಿವಾರ ಸಂಜೆಯಿಂದಲೇ ಮೋಡ‌ಕವಿದ ವಾತಾವರಣ ನಿರ್ಮಾಣವಾಗಿ ಕೆಲವಡೆ ಮಳೆಯಾಗಲು ಶುರುವಾಯಿತು.

ಈ ಮಧ್ಯ ಅಫಜಲಪುರ ತಾಲೂಕಿನ ಭೋಸಗಾ (ಬಿ) ಗ್ರಾಮದಲ್ಲಿ ಗುರುವಾರ ರಾತ್ರಿ ಸಿಡಲು ಬಡಿದು ಬೋಗಪ್ಪ ಮಾಂಗ್ (೫೮) ಎಂಬ ರೈತ ಮೃತಪಟ್ಟಿದ್ದಾರೆ.

ವಾಯ್ಹುಭಾರ ಕುಸಿತದಿಂದಾಗಿ ನಾಡಿನ ಹಲವು ಕಡೆಗಳಲ್ಲಿ ಎರಡು ದಿನ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net