ಹುಬ್ಬಳ್ಳಿ: ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನವರೆಗೆ ಭಾರೀ ಮಳೆ ದಾಖಲಾಗಿದೆ.
ತಾಲೂಕಿನ ಗಿರಿಯಾಲದಲ್ಲಿ ಮನೆಯೊಂದರ ಗೋಡೆ ಕುಸಿದು ಹಾನಿಯಾಗಿದೆ.
ನಗರದಲ್ಲಿ ಒಂದೇ ದಿನ -35.5ಮಿ.ಮೀ. ಮಳೆಯಾಗಿದೆ. ಉಳಿದಂತೆ ಛಬ್ಬಿ ಹೋಬಳಿ -23 ಮಿ.ಮೀ., ಶಿರಗುಪ್ಪಿ ಹೋಬಳಿ -25.2 ಮಿ.ಮೀ. ಹಾಗೂ ಬ್ಯಾಹಟ್ಟಿ ಹೋಬಳಿಯಲ್ಲಿ -19.6 ಮಿ.ಮೀ. ಮಳೆ ದಾಖಲಾಗಿದೆ.
ಭಾರೀ ಮಳೆಗೆ ಬೆಣ್ಣೆ ಹಳ್ಳ ಉಕ್ಕಿ ಹರಿದಿದೆ. ತಾಲೂಕಿನ ಇಂಗಳಹಳ್ಳಿ& ಕುಸುಗಲ್ ಮಧ್ಯದ ರಸ್ತೆ ಸೇತುವೆ ಮುಳುಗಡೆಯಾಗಿ ಕೆಲಹೊತ್ತು ರಸ್ತೆ ಸಂಚಾರ ಬಂದ್ ಆಗಿತ್ತು.
ಈ ಬಾರಿಯ ಮುಂಗಾರು ಹಂಗಾಮು ಆರಂಭದಿಂದ ಸುರಿದ ಮಳೆಯಿಂದಾಗಿ ಈವರೆಗೆ ನಗರದಲ್ಲಿ 31 ಮನೆಗಳು ಭಾಗಶಃ ಹಾನಿಯಾಗಿವೆ ಎಂದು ತಹಸೀಲ್ದಾರ್ ಕಚೇರಿ ಮೂಲಗಳು ತಿಳಿಸಿವೆ.