ಭಾರಿ ಮಳೆ ಮುನ್ನೆಚ್ಚರಿಕೆ ವಹಿಸಿ

28kmr3(Prabhu chavan, MLA)
Published on

ಔರಾದ್: ಜಿಲ್ಲೆಯಲ್ಲಿ ಕೆಲ ದಿನಗಳಿಂದ ಸತತ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ಗುರುವಾರ ಭಾರಿ ಮಳೆಯ ಮುನ್ಸೂಚನೆ ನೀಡಿದ್ದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಶಾಸಕ ಪ್ರಭು ಚವ್ಹಾಣ್ ಮನವಿ ಮಾಡಿದ್ದಾರೆ. ಜಾನುವಾರು ಮತ್ತು ಮನುಷ್ಯರು ನದಿ, ಹಳ್ಳ-ಕೊಳ್ಳಗಳಿಗೆ ಇಳಿಯಬಾರದು. ತುಂಬಿ ಹರಿಯುವ ಸೇತುವೆ ದಾಟಬಾರದು. ಮನೆ ಬೀಳುವ ಸ್ಥಿತಿಯಲ್ಲಿದ್ದರೆ ತಕ್ಷಣ ಹೊರಬಂದು ಸುರಕ್ಷಿತ ಮನೆ ಸೇರಬೇಕು ಎಂದು ಕೋರಿದ್ದಾರೆ. ಕಂದಾಯ, ಗ್ರಾಮ ಪಂಚಾಯಿತಿ, ಪೊಲೀಸ್, ಜೆಸ್ಕಾಂ, ಅಗ್ನಿಶಾಮಕ, ಕೃಷಿ ಸೇರಿ ಎಲ್ಲ ಇಲಾಖೆ ಅಧಿಕಾರಿಗಳು ಜಾಗ್ರತೆಯಿಂದ ಇರುವಂತೆ ಅವರು ಪ್ರಕಟಣೆ ಮೂಲಕ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net