ಮುಂಗಾರ ಮಳೆ ಅಬ್ಬರ; ಉಕ್ಕಿ ಹರಿಯುತ್ತಿವೆ ಹಳ್ಳ-ಕೊಳ್ಳಗಳು....

IMG-20240610-WA0001.jpg
Published on

ಬೆಳಗಾವಿ: ಕಳೆದ ನಾಲ್ಕೈದು ಸುರಿಯುತ್ತಿರುವ ಧಾರಾಕಾರ‌ ಮಳೆಯಿಂದ ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. 

ಬೆಳಗಾವಿ ನಗರ ಸೇರಿ ಖಾನಾಪುರ,‌ಮೂಡಲಗಿ, ರಾಮದುರ್ಗ,ಹುಕ್ಕೇರಿ, ಚಿಕ್ಕೋಡಿ, ರಾಯಬಾಗ,ಕಾಗವಾಡ,ನಿಪ್ಪಾಣಿ ಅಥಣಿ ತಾಲೂಕುಗಳಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದೆ.ಮಳೆ ಅಬ್ಬರಕ್ಕೆ ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದ ರಸ್ತೆಗಳು ಜಲಾವೃತವಾಗಿವೆ.
ಮಳೆ ಅಬ್ಬರದಿಂದ ಗ್ರಾಮೀಣ ಭಾಗದ ಹಳ್ಳಗಳು ಉಕ್ಕಿ ಹರಿಯುತ್ತಿವೆ.
ನಿನ್ನೆ ಸಂಜೆಯಿಂದ ಸುರಿಯುತ್ತಿರುವ
ಭಾರಿ ಮಳೆಯಿಂದಾಗಿ ರಾಯಬಾಗ ತಾಲೂಕಿನ ಪರಮನಾಂದವಾಡಿ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದೆ.ಮುಂಗಾರು ಆರಂಭ ಹಿನ್ನೆಲೆ ರೈತರು ಮೊಗದಲ್ಲಿ ಸಹಜವಾಗಿ ಮಂದಹಾಸ ಮೂಡಿದೆ.ಬಿತ್ತನೆ ಕಾರ್ಯಕ್ಕೆ ರೈತರು ಸಜ್ಜಾಗಿದ್ದಾರೆ.

ನಿಪ್ಪಾಣಿ ತಾಲೂಕಿನ ಲಖನಾಪುರ ಮನೋಜವಾಡಿ, ಚಿಕಳವಾಳ ಗ್ರಾಮ ಗಳಲ್ಲಿ ಭಾರಿ ಮಳೆಯಾಗಿದ್ದು,ಭಾರಿ ಮಳೆ ಹಿನ್ನೆಲೆ ಲಖನಾಪೂರ ಗ್ರಾಮದ ಹಳ್ಳ ಉಕ್ಕಿ ಹರಿಯುತ್ತಿವೆ.ಹಳ್ಳದ ಸಂಪರ್ಕ ರಸ್ತೆಯ ಮಧ್ಯೆ ಮಿನಿ ಟ್ರಕ್ ವಾಹನ ಸಿಕ್ಕಕೊಂಡಿದೆ. ಇನ್ನೂ ನೀರು ಬರುತ್ತಿದಂತೆ ಚಾಲಕ ವಾಹಣ ಬಿಟ್ಟು ಹೋಗಿ ಪ್ರಾಣಾಪಯದಿಂದ ಪಾರಾಗಿದ್ದಾನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net