ಮಳೆಗೆ ಮನೆ ಕುಸಿದು ವೃದ್ಧ ಸಾವು

Death 28 June 20
Published on

ಬೋರಗಾಂವ/ಸದಲಗಾ: ಸಮೀಪದ ಸದಲಗಾ ಪಟ್ಟಣದ ದತ್ತ ಚೌಕ್ ಬಳಿ ಧಾರಾಕಾರ ಮಳೆಯಿಂದಾಗಿ ಮನೆ ಕುಸಿದು ವೃದ್ಧರೊಬ್ಬರು ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ಕಲ್ಲಪ್ಪ ರಾಮಾ ಪರಗೌಡರ (70) ಮೃತಪಟ್ಟ ವೃದ್ಧ. ಮೃತರಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ. ಅಗ್ನಿಶಾಮಕ ದಳ ಹಾಗೂ ಪೊಲೀಸರು ಆಗಮಿಸಿ ವೃದ್ಧನ ಶವ ಹೊರತೆಗೆದಿದ್ದಾರೆ. ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಳೆಯಿಂದ ಗೋಡೆ, ಛಾವಣಿ ಕುಸಿದು ಕಲ್ಲಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ಎನ್‌ಡಿಆರ್‌ಎಫ್‌ನಿಂದ 4 ಲಕ್ಷ ರೂ. ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1 ಲಕ್ಷ ರೂ. ಸೇರಿ 5 ಲಕ್ಷ ರೂ. ಪರಿಹಾರ ಕೊಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಚಿಕ್ಕೋಡಿ ತಹಸೀಲ್ದಾರ್ ಸುಭಾಷ ಸಂಪಗಾವಿ ತಿಳಿಸಿದ್ದಾರೆ.

ಉಪವಿಭಾಗೀಯ ಅಧಿಕಾರಿ ರವೀಂದ್ರ ಕರಲಿಂಗಣ್ಣವರ, ಉಪ ತಹಸೀಲ್ದಾರ್ ಪಿ.ಬಿ. ಶಿರಿವಂತ, ಪುರಸಭೆ ಮುಖ್ಯಾಧಿಕಾರಿ ಪಿ.ಎ. ಕಲ್ಯಾಣಶೆಟ್ಟಿ, ಪೊಲೀಸ್ ಉಪನಿರೀಕ್ಷಕ ಆರ್.ವೈ. ಬೀಳಗಿ, ಕಂದಾಯ ನಿರೀಕ್ಷಕ ಆರ್.ಐ. ನಾಯಿಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net