ವರ್ಷಧಾರೆಯಿಂದ ಸಂಕಷ್ಟದಲ್ಲಿ ಕೊಪ್ಪಳ ರೈತರು, ವಿವಿಧ ಬೆಳೆಗಳು ಹಾನಿ

191121 Koppal District Rain Effect
ಕೊಪ್ಪಳದಲ್ಲಿ ಮಳೆ ಹಾನಿ.
Published on

ಕೊಪ್ಪಳ: ಜಿಲ್ಲಾದ್ಯಂತ ಶುಕ್ರವಾರ ಬೆಳಗ್ಗೆಯಿಂದ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಅಕಾಲಿಕ ಮಳೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ವಿವಿಧ ಬೆಳೆಗಳ ಕಟಾವು ಮಾಡಿ ರಾಶಿ ಹಾಕಿದ್ದಾರೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಫಸಲು ಹಾಳಾಗುತ್ತಿದೆ. ಇದರಿಂದಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಭತ್ತ, ತೊಗರಿ ಹಾಗೂ ದ್ರಾಕ್ಷಿ ಬೆಳೆಗೆ ಭಾರಿ ಹಾನಿಯಾಗಿದೆ. ದ್ರಾಕ್ಷಿ ಕಾಯಿಗಟ್ಟುತ್ತಿದ್ದು, ನಿರಂತರ ಮಳೆಯಿಂದ ಕಾಯಿ ಕೊಳೆಯುತ್ತಿದೆ.

ತೀವ್ರ ಮಳೆಯ ನಡುವೆಯೇ ಗೌರಿ ಹುಣ್ಣಿಮೆ ಅಂಗವಾಗಿ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಿರುವುದರಿಂದ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಡಲಾಗಿದೆ. ಇದರಿಂದಾಗಿ ಭಕ್ತರು ನದಿಯೆಡೆಗೆ ತೆರಳದಂತೆ ದೇವಸ್ಥಾನ ಸಿಬ್ಬಂದಿ ಸೂಚಿಸಿದರು. ನದಿಯಲ್ಲಿ ನೀರಿನ ಹರಿವು ಹೆಚ್ಚಿದ ಕಾರಣಕ್ಕೆ ಶಿವಪುರ ಗ್ರಾಮದ ಉಮೇಶರಾವ್ ಗಡ್ಡಿಯ ತೋಟದಲ್ಲಿ ಸಿಲುಕಿದ್ದ ನಾಗೇಶರಾವ್ ಹಾಗೂ ಬೇಬಿ ದಂಪತಿಯನ್ನು ಅಗ್ನಿಶಾಮಕದಳದ ಅಧಿಕಾರಿಗಳು ಬೋಟ್ ಮೂಲಕ ರಕ್ಷಿಸಿದರು.

ಶಾಲೆ, ಕಾಲೇಜುಗಳಿಗೆ ರಜೆ
ನಿರಂತರ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶುಕ್ರವಾರ ಅಂಗವನಾಡಿ ಹಾಗೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಈ ಕುರಿತು ಆದೇಶ ಹೊರಡಿಸಿದರು. ಆದರೆ, ಜಿಲ್ಲಾಧಿಕಾರಿ ಆದೇಶಕ್ಕೆ ಮುನ್ನವೇ ಶಾಲಾ, ಕಾಲೇಜಿಗೆ ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net