ಜಿಲ್ಲೆಯಲ್ಲಿ ಐದು ದಿನ ಮಳೆ ನಿರೀಕ್ಷೆ: ನಗರ ಸೇರಿದಂತೆ ಹಲವೆಡೆ ವರುಣನ ದರ್ಶನ

Rain expected for five days Mandya
Published on

ಮಂಡ್ಯ: ಜಿಲ್ಲೆಯಲ್ಲಿ ಏ.30ರಿಂದ ಮೇ 4ರವರೆಗೆ ತುಂತುರು ಮಳೆಯಾಗುವ ನಿರೀಕ್ಷೆ ಇದೆ. ಅಂತೆಯೇ ಮಂಗಳವಾರ ಸಂಜೆ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಜೋರು ಮಳೆಯಾಯಿತು.

ಭಾರತೀಯ ಹವಾಮಾನ ಇಲಾಖೆ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ನೀಡಿರುವ ಮಾಹಿತಿಯಂತೆ ಏ.30ರಂದು 5 ಮಿ.ಮೀ, ಮೇ 1ರಂದು 5 ಮಿ.ಮೀ, 2ರಂದು 5 ಮಿ.ಮೀ, 3ರಂದು 7 ಮಿ.ಮೀ ಹಾಗೂ 4ರಂದು 8 ಮಿ.ಮೀ ಮಳೆಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಗರಿಷ್ಟ 32 ರಿಂದ 33 ಡಿಗ್ರಿ, ಕನಿಷ್ಟ 23 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಲಿದೆ.

ಮಂಗಳವಾರ ಮಂಡ್ಯ ನಗರ, ಕೆ.ಎಂ.ದೊಡ್ಡಿ, ಮದ್ದೂರು ಸೇರಿದಂತೆ ಹಲವೆಡೆ ಮಳೆಯಾಯಿತು. ಬೆಳಗ್ಗೆಯಿಂದ ಬಿಸಿಲ ತಾಪ ಹೆಚ್ಚಾಗಿತ್ತು. ಸಂಜೆ ವೇಳೆ ಬಿರುಗಾಳಿ ಸಹಿತ ಮಳೆ ಸುರಿಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net