ಮನೆ ಹಾನಿಗೀಡಾದವರಿಗೆ ಪರಿಹಾರ ಪತ್ರ

02 hulsur 01
Published on

ಹುಲಸೂರು: ವಿವಿಧ ಗ್ರಾಮಗಳಲ್ಲಿ ೨೦೨೩-೨೪ನೇ ಸಾಲಿನಲ್ಲಿ ಮಳೆಯಿಂದ ಹಾನಿಗೊಳಗಾಗಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ಧನದ ತಿಳುವಳಿಕೆ ಪತ್ರವನ್ನು ಶಾಸಕ ಶರಣು ಸಲಗರ ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ವಿತರಿಸಿದರು.
ಹುಲಸೂರು ೨, ಸೋಲದಾಬಕಾ ೧, ಗೋರ್ಟಾ(ಬಿ) ೧, ಗಡಿರಾಯಪಳ್ಳಿ ೨, ಕಾದೇಪುರ ೧, ಲಿಂಬಾಪುರ ೧, ಬೇಲೂರ ೨, ಮುಚಳಂಬ ೧ ಸೇರಿ ೧೧ ಫಲಾನುಭವಿಗಳಿಗೆ ೫೦ ಸಾವಿರ ಪರಿಹಾರ ಧನದ ಹಕ್ಕುಪತ್ರ ವಿತರಿಸಲಾಯಿತು.
ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ: ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ, ಹೊರ ರೋಗಿಗಳಿಗೆ ದೊರೆಯುತ್ತಿರುವ ಚಿಕಿತ್ಸೆ ಕುರಿತು ವಿಚಾರಿಸಿದರು. ಕುಂದುಕೊರತೆ ಕುರಿತು ಆಲಿಸಿದರು. ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸಲು ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರಿಗೆ ಮನವಿ ಮಾಡಲಾಗುವುದು ಎಂದರು.
ಉಪತಹಸೀಲ್ದಾರ್ ಸಂಜೀವಕುಮಾರ ಭೈರೆ, ಕಂದಾಯ ನಿರೀಕ್ಷಕ ಶರಣು ಪವಾಡಶೆಟ್ಟಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಶಿಕಾಂತ ಕನ್ನಾಡೆ, ಬಿಜೆಪಿ ತಾಲೂಕು ಅಧ್ಯಕ್ಷ ಅಶೋಕ ವಕಾರೆ, ಪಿಕೆಪಿಎಸ್ ಅಧ್ಯಕ್ಷ ಓಂಕಾರ ಪಟ್ನೆ, ಗ್ರಾಪಂ ಸದಸ್ಯ ದೇವಿಂದ್ರ ಭೋಪಳೆ, ವಿದ್ಯಾಸಾಗರ ಬನಸೂಡೆ, ಪ್ರಮುಖರಾದ ವಿಶ್ವನಾಥ ಕಾಡಾದಿ, ರಣಜೀತ ಗಾಯಕವಾಡ, ಬಾಬುರಾವ ಬಾಲಕುಂದೆ, ಬಾಬುರಾವ ಮಲೋದೆ, ಸಿದ್ದು ಪಾರಶೆಟ್ಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net