ಮಹಾ ಗಡಿಯಲ್ಲಿ ಗಾಳಿಗೆ ಹಾರಿದ ಟೆಂಟ್, ಪೊಲೀಸರ ಜಾಗರಣೆ

IMG-20230407-WA0018
Published on

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಗುರುವಾರ ಮಧ್ಯರಾತ್ರಿಯಿಂದ ಗುಡುಗಿ ಸಿಡಿಲು ಸಹಿತ ಮಳೆಯಾಗುತ್ತಿದ್ದು, ಅಫಜಲಪುರ ದಲ್ಲಿ ಗಾಳಿಗೆ ಪೊಲೀಸ್ ಬ್ಯಾರಿಕೇಡ್, ಚೆಕ್ ಫೋಸ್ಟ್ ಟೆಂಟ್ ಹಾರಿ ಹೋಗಿವೆ.

ಬಿಸಿಲಿನ ಝಳಕ್ಕೆ ತತ್ತರಿಸಿದ ಜನತೆಗೆ ಮಳೆರಾಯ ತಂಪೇರಿದಿದ್ದು, ಹಲವು ಕಡೆ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಮಹಾರಾಷ್ಟ್ರ ಕರ್ನಾಟಕ ಗಡಿಭಾಗ ಬಳೂರ್ಗಿ ಹಾಗೂ ಅರ್ಜುಣಗಿ ಚೆಕ್‌ಪೊಸ್ಟ್ ಗಳಲ್ಲಿ ಪೋಲಿಸ್ ಟೆಂಟ್ ಗಳು ಧರೆಗುಳಿದಿವೆ.

ಚುನಾವಣೆ ಹಿನ್ನಲೆ ಚೆಕ್ ಪೊಸ್ಟ್ ಹಾಕಿ ಪೊಲೀಸ್ ಸಿಬ್ಬಂದಿಗಳಿಗೆ ಟೆಂಟ್ ಹಾಕಲಾಗಿತ್ತು. ನಿನ್ನೆ ರಾತ್ರಿ ಸುರಿದ ಮಳೆಗೆ ಟೆಂಟ್ ಗಳು ಹಾರಿ ಹೋಗಿದ್ದು, ಪೊಲೀಸರು ರಾತ್ರಿಯಿಡಿ ಜಾಗರಣೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net