

ಮಂಡ್ಯ: ಕಂದಾಯ ಇಲಾಖೆಯಲ್ಲಿ ಹೊಸ ತಂತ್ರಾಂಶ ಹಾಗೂ ನೀತಿಯನ್ನು ಜಾರಿಗೆ ತರಲಾಗಿದೆ. ಬೆಳೆಹಾನಿಯಾದಂತಹ ಪ್ರದೇಶಗಳ ಸಮೀಕ್ಷೆ ನಡೆಸಿ ಒಂದು ತಿಂಗಳಲ್ಲಿ ಪರಿಹಾರವನ್ನು ಒದಗಿಸುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಕೆ.ಆರ್.ಪೇಟೆ ತಾಲೂಕಿನ ವಿವಿಧೆಡೆ ಗುರುವಾರ ಮಳೆಹಾನಿ ಪ್ರದೇಶ ಪರಿಶೀಲಿಸಿದ ಬಳಿಕ ಮಾತನಾಡಿದರು. ಮಳೆಯಿಂದ ಮಂಡ್ಯ ಜಿಲ್ಲೆಯಲ್ಲಿ ಸುಮಾರು 30 ಮನೆಗಳು ಸಂಪೂರ್ಣ ಹಾಗೂ ಭಾಗಶಃ 176 ಮನೆ ಹಾನಿಯಾಗಿದೆ. 46 ಜಾನುವಾರುಗಳು, 168 ಹೆಕ್ಟೇರ್ ಕೃಷಿ ಬೆಳೆ, 32 ಹೆಕ್ಟೇರ್ ತೋಟಗಾರಿಕೆ ಬೆಳೆ, 85 ಕಿ.ಮೀ ರಸ್ತೆ, 37 ಸೇತುವೆ, 9 ಶಾಲೆಗಳು, 319 ವಿದ್ಯುತ್ ಕಂಬಗಳು ಹಾನಿಯಾಗಿರುತ್ತದೆ. ಮಂಡ್ಯದಲ್ಲಿ 5, ಮದ್ದೂರಿನಲ್ಲಿ 3, ನಾಗಮಂಗಲ 1 ಹಾಗೂ ಕೆ.ಆರ್.ಪೇಟೆಯಲ್ಲಿ 5 ಕೆರೆಗೆ ಹಾನಿಯಾಗಿದೆ ಎಂದರು.
ಸಚಿವರಾದ ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣಗೌಡ, ಡಿಸಿ ಎಸ್.ಅಶ್ವಥಿ ಇತರರಿದ್ದರು.