ಮಳೆ ಎಫೆಕ್ಟ್​: ಚಿಕನ್ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್​, ಕಾರ್ಮಿಕ ಸಾವು

New Project(25)
Published on

ದೇವನಹಳ್ಳಿ: ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಚಿಕನ್​ ಶಾಪ್​ನಲ್ಲಿ ವೈಕ್ತಿಯೊಬ್ಬ ಬಲಿಯಾದ ಘಟನೆ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ನಗರದಲ್ಲಿ ಸಂಭವಿಸಿದೆ.

ಗೌರಿಬಿದನೂರು ಮೂಲದ ಶ್ರೀರಾಮ್ (29) ಮೃತ ದುರ್ದೈವಿ. ಅಂಬರೀಶ್ ಎಂಬುವರಿಗೆ ಸೇರಿದ, ದೊಡ್ಡಬಳ್ಳಾಪುರ ನಗರದ ಕೋರ್ಟ್ ರಸ್ತೆಬದಿಯಲ್ಲಿರುವ ಹಜ್ ಚಿಕನ್​ ಶಾಪ್​ನಲ್ಲಿ ಶ್ರೀರಾಮ್​ ಕೆಲಸ ಮಾಡುತ್ತಿದ್ದ. ಮಂಗಳವಾರ ರಾತ್ರಿ ಧಾರಾಕರ ಮಳೆಯಾಗಿದ್ದು, ಮಳೆ ನೀರು ಅಂಗಡಿಗೆ ನುಗ್ಗಿತ್ತು. ಸಿಡಿಲು ಬಡಿದು ಅಂಗಡಿಯಲ್ಲಿ ಶಾರ್ಟ್​ ಸರ್ಕ್ಯೂಟ್​ ಸಂಭವಿಸಿದೆ. ಇದ್ಯಾವುದರ ಪರಿವೆ ಇಲ್ಲದ ಶ್ರೀರಾಮ್​, ಬುಧವಾರ ಬೆಳಗ್ಗೆ ಅಂಡಿಯ ಒಳಗಿದ್ದ ಮಳೆನೀರನ್ನು ಹೊರಹಾಕಲು ಹೋಗಿದ್ದಾರೆ. ಆ ವೇಳೆ ವಿದ್ಯುತ್​ ಪ್ರವಹಿಸಿ ಮೃತಪಟ್ಟಿದ್ದಾನೆ. ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದ ಮುಗಿಲು ಮುಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net