ಕುಂದಾಪುರ: ತಾಲೂಕಿನಾದ್ಯಂತ ಶನಿವಾರ ಭಾರಿ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೆರೆ ನೀರು ನುಗ್ಗಿದೆ. ರಾಷ್ಟ್ರೀಯ ಹೆದ್ದಾರಿ ಹೊಳೆಯಂತಾಗಿ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗಿ ಹೆದ್ದಾರಿಯಲ್ಲಿ ಕಿಲೋ ಮೀಟರ್‌ಗಟ್ಟಲೆ ವಾಹನಗಳ ಸಾಲುನಿಂತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ರಸ್ತೆಯಲ್ಲಿ ಆಗಮಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಕಾರನ್ನು ಹೋರಾಟಗಾರರು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಹೆದ್ದಾರಿಯಲ್ಲಿ ಮಳೆ ನೀರು ನಿಂತು ಹೊಂಡ- ಗುಂಡಿಗಳು ಸೃಷ್ಟಿಯಾಗಿ ಬೆಳಗ್ಗೆನಿಂದಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ನಾವುಂದ, ಸಾಲ್ಬುಡ, ಕುರು, ಬಟ್ಟೆಕುದ್ರು, ಬಡಾಕೆರೆ, ನಾಡಾ ಕಡ್ಕೆ, ಯಳೂರು, ತೊಪ್ಲು, ಬಟ್ಟೆಕುದ್ರು, ಕನ್ನಡಕುದ್ರು ಪ್ರದೇಶದಲ್ಲಿ ನೆರೆ ಮತ್ತೆ ವಕ್ಕರಿಸಿದೆ. ತಗ್ಗು ಪ್ರದೇಶದ ಬಯಲೆಲ್ಲಾ ಮುಳುಗಡೆ ಆಗಿದೆ.
ಸಚಿವರ ಕಾರಿಗೆ ತಡೆ: ಹೆದ್ದಾರಿ ಸಮಸ್ಯೆ ಬಗ್ಗೆ ಬೇಸತ್ತ ಹೆದ್ದಾರಿ ಹೋರಾಟ ಸಮಿತಿ ಸದಸ್ಯರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾರು ತಡೆದು ರಸ್ತೆ ಅವ್ಯವಸ್ಥೆ ಗಮನಕ್ಕೆ ತಂದು ಆಕ್ರೋಶ ವ್ಯಕ್ತ ಪಡಿಸಿದರು. ಕುಂದಾಪುರ ತಾಲೂಕು ಪಂಚಾಯಿತಿ ಕಾರ‌್ಯಕ್ರಮಕ್ಕೆ ಆಗಮಿಸಿ ಮರಳುತ್ತಿರುವ ಸಂದರ್ಭ ಕುಂದಾಪುರ ಬಸ್ರೂರು ಮೂರುಕೈ ಕೃತಕ ನೆರೆ ಸೃಷ್ಟಿಯಾದ ಸ್ಥಳದಲ್ಲಿ ಸಚಿವರ ಕಾರು ತಡೆದು, ಹೆದ್ದಾರಿ ಕಾಮಗಾರಿ ಆರಂಭದ ದಿನದಿಂದಲೂ ಬಸ್ರೂರು ಮೂರುಕೈ ಬಳಿ ಸಮಸ್ಯೆ ಉಂಟಾಗುತ್ತಿದ್ದು ಸಮಸ್ಯೆ ಶೀಘ್ರ ಪರಿಹರಿಸುವಂತೆ ಹೋರಾಟ ಸಮಿತಿ ಹಾಗೂ ಸ್ಥಳೀಯರು ಸಚಿವರ ಒತ್ತಾಯಿಸಿದರು. ಈ ವೇಳೆ ಸಚಿವರು ಮತ್ತು ಹೋರಾಟ ಸಮಿತಿ ಪದಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳದಲ್ಲೇ ಡಿಸಿ ಜತೆ ಮಾತನಾಡಿದ ಸಚಿವರು, ಸಮಸ್ಯೆ ಬಗೆಹರಿಸಲು ಸೂಚಿಸಿದರು. ಡಿಸಿ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಬಂಧಪಟ್ಟವರಿಗೆ ಮಾತನಾಡಿ ಸಮಸ್ಯೆ ಪರಿಹಾರಿಸಲು ಸೂಚಿಸಿದ್ದೇನೆ ಎಂದು ಪ್ರತಿಭಟನಾಕಾರರಿಗೆ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಪ್ರಮುಖ ಕಿಶೋರ್ ಕುಮಾರ್ ಕುಂದಾಪುರ, ಪುರಸಭೆ ಮಾಜಿ ಉಪಾದ್ಯಕ್ಷ ರಾಜೇಶ್ ಕಾವೇರಿ, ವಕೀಲ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಪತ್ರಕರ್ತ ಸಂಘ ಅಧ್ಯಕ್ಷ ಶಶಿಧರ ಹೆಮ್ಮಾಡಿ, ಗಣೇಶ್, ಆಟೋ ಚಾಲಕರು, ಅಂಗಡಿ ಮಾಲೀಕರು ಮತ್ತಿತರರು ಇದ್ದರು.
ಅಣೆಕಟ್ಟು ಗೇಟು ತೆರವುಗೊಳಿಸದೆ ಕೃತಕ ನೆರೆ
ಕಾರ್ಕಳ: ಮಳೆಗಾಲ ಆರಂಭಗೊಂಡು ಮೂರು ತಿಂಗಳು ಕಳೆಯುತ್ತಿದ್ದರೂ ಮುಂಡ್ಲಿ ಕಿಂಡಿ ಅಣೆಕಟ್ಟು ಹೈಡ್ರೋಲಿಕ್ ಗೇಟ್ ತೆರವುಗೊಳಿಸದ ಕಾರಣ ಅಣೆಕಟ್ಟು ಪರಿಸರದಲ್ಲಿ ಕೃತಕ ನೆರೆ ಉಂಟಾಗಿದೆ. ಪರಿಸರದ ಫಲವತ್ತಾದ ತೋಟಗಳು ಹಾನಿಗೊಳಗಾಗಿದೆ.
ಮುಂಡ್ಲಿ ಕಿಂಡಿಅಣೆಕಟ್ಟು ಪರಿಸರದಲ್ಲಿ ನಿರ್ಮಾಣವಾಗಿರುವ ವಿದ್ಯುತ್ ಸ್ಥಾವರದ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ. ಕೆಲ ವರ್ಷಗಳಿಂದ ಇಂತಹದೇ ಅವಾಂತರ ಎದುರಾಗುತ್ತಿದೆ. ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದರೂ ಕಿಂಡಿಅಣೆಕಟ್ಟಿಗೆ ಅಳವಡಿಸಿದ ಹೈಡ್ರೋಲಿಕ್ ಗೇಟ್ ತೆರವುಗೊಳಿಸದ ಹಿನ್ನೆಲೆಯಲ್ಲಿ ಪರಿಸರದಲ್ಲಿ ಮಳೆ ನೀರು ಶೇಖರಣೆಗೊಳ್ಳುತ್ತಿದೆ. ಇದರಿಂದಾಗಿ ತೋಟಗಳಿಗೂ ನೀರು ನುಗ್ಗಿ ಬೆಳೆ ಹಾನಿಗೊಳಗಾಗಿದೆ.
ತುಂಬಿ ಹರಿಯುತ್ತಿದೆ ಸ್ವರ್ಣ ನದಿ
ಕಾರ್ಕಳ: ಪಶ್ಚಿಮಘಟ್ಟದಲ್ಲಿ ಕಳೆದ ಕೆಲ ದಿನಗಳಿಂದಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸ್ವರ್ಣ ನದಿ ತುಂಬಿ ಹರಿಯುತ್ತಿದೆ.
ಪಶ್ಚಿಮಘಟ್ಟದಲ್ಲಿ ತಪ್ಪಲು ಪ್ರದೇಶದಿಂದ ಉಗಮವಾಗುವ ಸ್ವರ್ಣ ನದಿ ಮಾಳ ಗ್ರಾಮದ ಮಲ್ಲಾರು, ಮುಳ್ಳೂರು, ಪಟ್ಟಣಹಿತ್ಲು, ಹೇರಂಜೆ, ಕಲ್ಯಾಣಿ, ಎಡಪ್ಪಾಡಿ, ಹೊಯ್ಗೆಹಿತ್ಲು, ಹೆಗ್ಗಡೆಮನೆ ಮತ್ತು ಕಡಂದಲಾಜೆ ಮೊದಲಾದೆಡೆಯ ತೊರೆಗಳು ಪಶ್ಚಿಮಾಭಿಮುಖವಾಗಿ ಹರಿಯುವ ಈ ತೊರೆಗಳೆಲ್ಲವೂ ಕಡಾರಿ(ಮಾಚೊಟ್ಟೆ) ಹೊಳೆಯನ್ನು ಸೇರಿ ಎಣ್ಣೆಹೊಳೆಯನ್ನು ಕೂಡಿಕೊಂಡು ಗ್ರಾಮದ ಹೊರಗಡೆ ಸ್ವರ್ಣ ಎಂಬ ನಾಮಾಂಕಿತದೊಂದಿಗೆ ಪರಿಚಯಿಸಿಕೊಂಡು ಉಡುಪಿಯ ಕಲ್ಯಾಣಪುರದಲ್ಲಿ ಸಮುದ್ರದೊಂದಿಗೆ ಲೀನವಾಗುತ್ತದೆ.
ಸ್ವರ್ಣ ನದಿಗೆ ಬಲ್ಮಗುಂಡಿ(ಮುಂಡ್ಲಿ)ಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಿ ಕಾರ್ಕಳ ಪುರಸಭಾ ವ್ಯಾಪ್ತಿಗೆ ಹಾಗೂ ಹಿರಿಯಡ್ಕ ಬಜೆ ಎಂಬಲ್ಲಿ ಕಿಂಡಿಅಣೆಕಟ್ಟು ನಿರ್ಮಿಸಿ ಉಡುಪಿ ಪುರಸಭಾ ವ್ಯಾಪ್ತಿಗೆ ಸಮಗ್ರ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ.
ತುಂಬಿ ಹರಿಯುತ್ತಿರುವ ಸ್ವರ್ಣ ನದಿಯ ದೃಶ್ಯಾವಳಿ ಕಂಣ್ತುಂಬಿಕೊಳ್ಳಲು ಜನರು ಅಗಮಿಸುತ್ತಿರುವುದು ಕಂಡು ಬಂದಿದೆ.
ಕೋಡಿ ಕಡಲು ಕೊರೆತ ಪ್ರದೇಶ ಶಾಸಕ ಪರಿಶೀಲನೆ
ಕುಂದಾಪುರ: ಎಂ.ಕೋಡಿ ಕಡಲು ಕೊರೆತ ಪ್ರದೇಶಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಶನಿವಾರ ಭೇಟಿ ನೀಡಿ ಈ ಪ್ರದೇಶದಲ್ಲಿ ನಡೆಯುತ್ತಿರುವ ತುರ್ತು ಕಾಮಗಾರಿ ವೀಕ್ಷಿಸಿದರು.
ಎಂ.ಕೋಡಿ ಪರಿಸರದಲ್ಲಿ ಉಂಟಾದ ಕಡಲು ಕೊರೆತ ಬಗ್ಗೆ ವಿಜಯವಾಣಿ ವರದಿ ಬಳಿಕ ನಡೆಯುತ್ತಿರುವ ತುರ್ತು ಕಾಮಗಾರಿ ವೀಕ್ಷಿಸಿದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೋಡಿ ಕಡಲು ಕೊರೆತ ಬಗ್ಗೆ ಸಚಿವರು, ಜಿಲ್ಲಾಧಿಕಾರಿ, ಎಸಿ ಜತೆ ಚರ್ಚಿಸಿದ್ದೇನೆ. ಪ್ರಸಕ್ತ ತುರ್ತು ಕಾಮಗಾರಿ ನಡೆಯುತ್ತಿದ್ದು, ಶಾಶ್ವತ ಕಡಲು ಕೊರೆತ ನಿವಾರಣೆ ಮಾಡಲಾಗುತ್ತದೆ. ಯಾರೂ ಆತಂಕ ಪಡಬಾರದು ಎಂದರು.
ಇದೇ ಸಂದರ್ಭ ಪರಿಸರದ ನಿವಾಸಿಗಳಿಗೆ ಶಾಸಕರು ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಿದರು. ಕುಂದಾಪುರ ಪುರಸಭೆ ಮಾಜಿ ಉಪಾಧ್ಯಕ್ಷ ನಾಗರಾಜ ಕಾಂಚನ್ ಕೋಡಿ, ತಾಲೂಕು ಪಂಚಾಯಿತಿ ಸದಸ್ಯ ಮಂಜು ಬಿಲ್ಲವ, ದೀಪಕ್ ಕುಮಾರ್ ಪೂಜಾರಿ ಕೋಡಿ ಮತ್ತಿತರರಿದ್ದರು.
ಅಣೆಕಟ್ಟು ಗೇಟು ತೆರವುಗೊಳಿಸದೆ ಕೃತಕ ನೆರೆ:
ಕಾರ್ಕಳ: ಮಳೆಗಾಲ ಆರಂಭಗೊಂಡು ಮೂರು ತಿಂಗಳು ಕಳೆಯುತ್ತಿದ್ದರೂ ಮುಂಡ್ಲಿ ಕಿಂಡಿ ಅಣೆಕಟ್ಟು ಹೈಡ್ರೋಲಿಕ್ ಗೇಟ್ ತೆರವುಗೊಳಿಸದ ಕಾರಣ ಅಣೆಕಟ್ಟು ಪರಿಸರದಲ್ಲಿ ಕೃತಕ ನೆರೆ ಉಂಟಾಗಿದೆ. ಪರಿಸರದ ಫಲವತ್ತಾದ ತೋಟಗಳು ಹಾನಿಗೊಳಗಾಗಿದೆ.
ಮುಂಡ್ಲಿ ಕಿಂಡಿಅಣೆಕಟ್ಟು ಪರಿಸರದಲ್ಲಿ ನಿರ್ಮಾಣವಾಗಿರುವ ವಿದ್ಯುತ್ ಸ್ಥಾವರದ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ. ಕೆಲ ವರ್ಷಗಳಿಂದ ಇಂತಹದೇ ಅವಾಂತರ ಎದುರಾಗುತ್ತಿದೆ. ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದರೂ ಕಿಂಡಿಅಣೆಕಟ್ಟಿಗೆ ಅಳವಡಿಸಿದ ಹೈಡ್ರೋಲಿಕ್ ಗೇಟ್ ತೆರವುಗೊಳಿಸದ ಹಿನ್ನೆಲೆಯಲ್ಲಿ ಪರಿಸರದಲ್ಲಿ ಮಳೆ ನೀರು ಶೇಖರಣೆಗೊಳ್ಳುತ್ತಿದೆ. ಇದರಿಂದಾಗಿ ತೋಟಗಳಿಗೂ ನೀರು ನುಗ್ಗಿ ಬೆಳೆ ಹಾನಿಗೊಳಗಾಗಿದೆ.
ತುಂಬಿ ಹರಿಯುತ್ತಿದೆ ಸ್ವರ್ಣ ನದಿ: