ಹೊಳೆನರಸೀಪುರದಲ್ಲಿ ಮಳೆಯ ಅವಾಂತರ

ಹಿರೇಬೆಳಗಲಿ ಗ್ರಾಮದ ರಾಜಯ್ಯ ಅವರ ಮನೆಯ ಛಾವಣಿ ಹಾರಿ ಹೋಗಿರುವುದು.
ಹಿರೇಬೆಳಗಲಿ ಗ್ರಾಮದ ರಾಜಯ್ಯ ಅವರ ಮನೆಯ ಛಾವಣಿ ಹಾರಿ ಹೋಗಿರುವುದು.
Published on

ಹೊಳೆನರಸೀಪುರ; ಬಿರುಗಾಳಿ ಸಹಿತ ಸುರಿದ ಮಳೆಗೆ  ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮನೆಗಳ ಛಾವಣಿ ಹಾರಿಯೋಗುವ ಮೂಲಕ ಅವಾಂತರ ಸೃಷ್ಟಿಯಾಗಿದೆ.

ಆಲಿಕಲ್ಲು ಸಹಿತ ಸುರಿದ ಮಳೆ, ಗಾಳಿ ಆರ್ಭಟಕ್ಕೆ ಮನೆ ಹೆಂಚು ಮತ್ತು ತಗಡಿನ ಛಾವಣಿಗಳು ಚೆಲ್ಲಾಪಿಲ್ಲಿಯಾಗಿವೆ. ಮಳಲಿ ಗ್ರಾಮದಲ್ಲಿ ಭಾರಿ ಪ್ರಮಾಣದಲ್ಲಿ ಆಲಿಕಲ್ಲು ರಾಶಿ ಬಿದ್ದ ಪರಿಣಾಮ ಕೆಲ ಹೊತ್ತು ಹಿಮಗಡ್ಡೆಗಳ ದರ್ಶನವಾಯಿತು.

ತಾಲೂಕಿನ ಹುಚ್ಚನಕೊಪ್ಪಲು, ಸಬ್ಬನಹಳ್ಳಿ ಗ್ರಾಮದ ರಾಜೇಗೌಡರ ನಿವಾಸಕ್ಕೆ ಹೊಂದಿಕೊಂಡತಿರುವ ಕೊಟ್ಟಿಗೆಯಲ್ಲಿನ 40 ಶೀಟ್‌ಗಳು ಹಾರಿ ನೆಲಕ್ಕೆ ಬಿದ್ದಿವೆ. ಇದರಿಂದ ಸಾಕು ಪ್ರಾಣಿಗಳು, ಜಾನುವಾರುಗಳು ಮಳೆಯಿಂದ ರಾತ್ರಿ ನಲುಗುವಂತಾಗಿತ್ತು. ಅಂತೆಯೇ ಹಿರೇಬೆಳಗಲಿ ಗ್ರಾಮದ ರಾಜಯ್ಯ ಅವರ ನಿವಾಸದ ಹೆಂಚುಗಳು ಹಾರಿ ಹೋಗಿದೆ.

ಪಟ್ಟಣದ ಕಿಕ್ಕೇರಮ್ಮ ಕೊತ್ತಲು ಬಡಾವಣೆಯಲ್ಲಿನ ಸ್ವಾಮಿ ಅವರ ಮನೆ ಹೆಂಚುಗಳಿಗೂ ಹಾನಿಯಾಗಿದ್ದು, ಛಾವಣಿ ಹಾರಿ ಹೋದ ಪರಿಣಾಮ ಟಿವಿ ಮತ್ತಿತರ ಎಲೆಕ್ಟ್ರಾನಿಕ್ ಉಪಕರಣಗಳು ನೀರಿನಲ್ಲಿ ಮುಳುಗಿ ನಿರುಪಯುಕ್ತವಾಗಿದೆ.

ಇನ್ನು ಹಲವರ ಮನೆಯ ಮೇಲಿನ ಸೋಲಾರ್ ಮೇಲೆ ವಸ್ತುಗಳು ಬಿದ್ದು ನಷ್ಟ ಉಂಟಾಗಿದೆ. ಮನೆಯಲ್ಲಿ ಇರಿಸಿದ್ದ ಧಾನ್ಯ ಮೂಟೆಗಳು ನೆನೆದು ಹೋಗಿವೆ. ಇದರೊಂದಿಗೆ ರಸ್ತೆಗೆ ಹಾಕಲಾಗಿದ್ದು ತೇಪೆಗಳು ಬಿರುಕು ಬಿಟ್ಟು ಗುಂಡಿಗಳು ನಿರ್ಮಾಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net