

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ದಿನವಿಡೀ ಅಬ್ಬರಿಸಿದ ವರುಣ, ಬುಧವಾರ ತನ್ನ ಪ್ರತಾಪವನ್ನು ತುಸು ತಗ್ಗಿಸಿದ್ದಾನೆ. ಘಟ್ಟದ ತಪ್ಪಲಿನ ಬೆಳ್ತಂಗಡಿ, ಕಡಬ, ಸುಳ್ಯ ಭಾಗದಲ್ಲಿ ಮಳೆ ಅಬ್ಬರ ಸ್ವಲ್ಪ ಕಡಿಮೆಯಾಗಿದ್ದು, ಆದರೆ ಸಂಪೂರ್ಣ ನಿಂತಿಲ್ಲ. ಇನ್ನೊಂದಡೆ ಮಂಗಳೂರ ನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ ಸ್ವಲ್ಪ ಮಳೆಯಾಗಿದ್ದು, 9 ಗಂಟೆಯ ವೇಳೆಗೆ ಮೋಡದ ಮರೆಯಲ್ಲಿ ಸೂರ್ಯನ ಆಗಮನವಾಗಿದೆ. ಹವಾಮಾನ ಇಲಾಖೆಯ ಆರೆಂಜ್ ಎಚ್ಚರಿಕೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಅಂಗನವಾಡಿ, ಶಾಲಾ- ಕಾಲೇಜುಗಳಿಗೆ ಬುಧವಾರವೂ ರಜೆ ಘೋಷಿಸಲಾಗಿದೆ. ಗ್ರಾಮೀಣ ಭಾಗದ ತಗ್ಗು ಪ್ರದೇಶಗಳಲ್ಲಿ ಏರಿದ್ದ ಇಳಿದಿಲ್ಲ. ಸಾಯಂಕಾಲ ವೇಳೆಗೆ ಮಳೆ ಮತ್ತಷ್ಟು ಕಡಿಮೆಯಾದರೆ ಇಳಿಯುವ ಸಾಧ್ಯತೆಯಿದೆ.