

ಧಾರವಾಡ: ಹೋಳಿ ಪ್ರಯುಕ್ತ ಅರವಿಂದ ಬೆಲ್ಲದ ಅಭಿಮಾನಿ ಬಳಗ, ಧಾರವಾಡ ಬಣ್ಣದ ಉತ್ಸವ ಸಮಿತಿಯಿಂದ ಮಾ. 15ರಂದು ನಗರದ ಕೆಸಿಡಿ ಬಳಿ ಆಯೋಜಿಸಿದ್ದ ಗಡಿಗೆ ಒಡೆಯುವ ಸ್ಪರ್ಧೆ, ರೇನ್ ಡಾನ್ಸ್ ಕಾರ್ಯಕ್ರಮದ ಸ್ಥಳ ಬದಲಾವಣೆ ಮಾಡಲಾಗಿದೆ. ಅಂದು ಕರ್ನಾಟಕ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಇರುವುದರಿಂದ ಕೆಸಿಡಿ ಬದಲು ಎಲ್‌ಐಸಿ ಬಳಿಯ ಎಸ್‌ಬಿಐ ವೃತ್ತದಲ್ಲಿ ಆಚರಿಸಲಾಗುವುದು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಅರವಿಂದ ಬೆಲ್ಲದ ಅಭಿಮಾನಿ ಬಳಗ ಪ್ರಕಟಣೆಯಲ್ಲಿ ತಿಳಿಸಿದೆ.