ರಂಗಕೇಸರಿ ಬಣ್ಣದಾಟಕ್ಕೆ ರೇನ್ ಡ್ಯಾನ್ಸ್ ಮೆರುಗು

Rain Dance Adds Sparkle to the Saffron Color on the Stage
Rain Dance Adds Sparkle to the Saffron Color on the Stage
Published on

ಜಮಖಂಡಿ: ಹೋಲಿ ಹಬ್ಬದ ಹಿನ್ನೆಲೆಯಲ್ಲಿ ನಗರದ ಬಸವ ಭವನದ ಮೈದಾನದಲ್ಲಿ ರಂಗಕೇಸರಿ ಉತ್ಸವ ಸಮಿತಿ ನೇತೃತ್ವದಲ್ಲಿ ಆಯೋಜಿಸಿದ್ದ ರಂಗಕೇಸರಿ ಬಣ್ಣದಾಟಕ್ಕೆ ನಗರ ಸೇರಿ ತಾಲೂಕಿನ ವಿವಿಧ ಗ್ರಾಮಗಳಿಂದ ಯುವಕರು, ಯುವತಿಯರು, ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಬಣ್ಣದಲ್ಲಿ ಮಿಂದೆದ್ದ ಸಾವಿರಾರು ಯುವಕರು, ಯುವತಿಯರು ಒಂದೆಡೆ ಸೇರಿ ರೇನ್ ಡ್ಯಾನ್ಸ್ ಮಾಡಿ ಕುಣಿದು ಕುಪ್ಪಳಿಸಿದರು. ಡಿಜೆ ಸಂಗೀತ ಹಾಗೂ ಮುಖಂಡರ ಉತ್ಸಾಹಕ್ಕೆ ಕಾರ್ಯಕರ್ತರು, ಬೆಂಬಲಿಗರು, ಮಕ್ಕಳು ಸಾಮೂಹಿಕ ಹೆಜ್ಜೆಹಾಕಿ ಸಂಭ್ರಮಿಸಿದರು.

ಮಹಿಳೆಯರಿಗೆ, ಪುರುಷರಿಗೆ, ಪ್ರತ್ಯೇಕ ವಿಭಾಗಗಳಲ್ಲಿ ಹೋಳಿ ಆಚರಣೆಗೆ ವ್ಯವಸ್ಥೆ ಮಾಡಲಾಗಿತ್ತು.

ನಗರದ ಜೋಳದ ಬಜಾರ ಹತ್ತಿರ, ಹನಮಂತ ದೇವಸ್ಥಾನ ಹತ್ತಿರ, ಓಲೇಮಠ ಹತ್ತಿರ, ಬನಶಂಕರಿ ದೇವಸ್ಥಾನ, ಹೊಕ್ಕಳ ಬಾವಿ ಹತ್ತಿರ, ಲಕ್ಷ್ಮೀ ನಗರ, ಶಾಂತಿ ನಗರ, ಕುಂಬಾರ ಗಲ್ಲಿ, ಗಣಪತಿ ಗಲ್ಲಿ ಸೇರಿ ವಿವಿಧ ಗಲ್ಲಿಗಳಲ್ಲಿ ಕಾಮನ ದಹನ ಮಾಡಿ ಸಂಭ್ರಮಿಸಿದರು.

ಯುವಕರು ವಿವಿಧ ವೇಷಭೂಷನ ತೊಟ್ಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರ ಗಮನ ಸೆಳೆದರು. ಇನ್ನೊಂದು ಯುವಕರ ಗುಂಪು ವಿವಿಧ ಮುಖವಾಡ ಧರಿಸಿ ಸಂಭ್ರಮಿಸಿತು.

ಕಲ್ಯಾಣ ನಗರದ ಲಕ್ಷ್ಮಿ ಮಹಿಳಾ ಮಂಡಳದ ಸದಸ್ಯೆಯರು, ಯುವತಿಯರು ಪರಸ್ಪರ ಬಣ್ಣ ಎರಚುವ ಮೂಲಕ ಬಣ್ಣದಾಟವಾಡಿದರು. ವಿಜಯಲಕ್ಷ್ಮೀ ಪಟ್ಟಣಶೆಟ್ಟಿ, ಪ್ರಭಾವತಿ ದುದಗಿ, ಶೈಲಜಾ ಸಿಂಧೂರ, ನೀಲಕ್ಕ ಬಿರಾದಾರ, ಸರೋಜನಿ ಮುಧೋಳ, ಶಾಂತಾ ಉಟಗಿ ಇತರರು ಇದ್ದರು.

ಅಹಿತಕರ ಘಟನೆ ನಡೆಯದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net