ಮಳೆಹಾನಿ: ಶಾಸಕ ಬೇಳೂರು ಪರಿಶೀಲನೆ

19 Thyagarthi
Published on

ಆನಂದಪುರ: ಸತತ 2-3 ದಿನಗಳಿಂದ ಸುರಿದ ಮಳೆಯಿಂದ ಹಾನಿಗೆ ಒಳಗಾದ ಆನಂಪುರ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ ನೀಡಿ ಪರಿಶೀಲಿಸಿದರು.

ಇಸ್ಲಾಂಪುರ, ಖೈರಾ, ಮುರುಘಾಮಠ, ಭೈರಾಪುರ ಗ್ರಾಮಗಲ್ಲಿ ಗಾಳಿ ಮಳೆಯಿಂದ ಫಸಲು ಭರಿತ ಬಾಳೆ ಮರಗಳು ಬಿದ್ದಿರುವುದನ್ನು ವೀಕ್ಷಿಸಿದರು.
ವಿವಿಧೆಡೆ ಮರದ ರೆಂಬೆ ಬಿದ್ದು ವಾಸದ ಮನೆ, ಅಂಗಡಿ ಮಳಿಗೆ, ಗೋದಾಮುಗಳ ಛಾವಣಿಗೆ ಹಾನಿಯಾಗಿತ್ತು. ಅಕಾಲಿಕ ಮಳೆಯಿಂದ ಸಾರ್ವಜನಿಕರು ಜಾಗೃತರಾಗಿರಬೇಕು ಎಂದು ಶಾಸಕರು ಇದೇ ವೇಳೆ ಹೇಳಿದರು.
ಕಾಂಗ್ರೆಸ್ ಪ್ರಮುಖರಾದ ಸೋಮಶೇಖರ್ ಲ್ಯಾವಿಗ್ಗೆರೆ, ಎನ್.ಉಮೇಶ, ರಹಮತ್ ಉಲ್ಲಾ, ರಮಾನಂದ ಸಾಗರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net