ಅರಿಯಡ್ಕ ಗ್ರಾಪಂ ವ್ಯಾಪ್ತಿ ಹಲವೆಡೆ ಹಾನಿ

Ism_Mane haani
Published on

ಪುತ್ತೂರು ಗ್ರಾಮಾಂತರ: ಅರಿಯಡ್ಕ ಗ್ರಾಪಂ ವ್ಯಾಪ್ತಿಯ ಹಲವು ಕಡೆಗಳಲ್ಲಿ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಮಾಡ್ನೂರು ಗ್ರಾಮದ ಮಾಡನ್ನೂರಿನಲ್ಲಿ ಕಮಲಾ ಎಂಬುವರ ಮನೆ ಮೇಲೆ ಮರವೊಂದು ಉರುಳಿ ಬಿದ್ದು ಮನೆಗೆ ಹಾನಿಯಾಗಿದೆ.

ಅರಿಯಡ್ಕ ಗ್ರಾಮದ ಗೋಳ್ತಿಲ ನಿವಾಸಿ ಸುಬ್ರಹ್ಮಣ್ಯ ಭಟ್ ಎಂಬುವರ ಮನೆ ಬದಿಯ ದರೆ ಮನೆ ಬದಿಗೆ ಕುಸಿದು ಬಿದ್ದಿದೆ. ಮಾಡ್ನೂರು ಗ್ರಾಮದ ಸಲ್ಫೇಟಿ ಎಂಬಲ್ಲಿ ಬೃಹತ್ ಗಾತ್ರದ ಮರ ಸೇತುವೆ ಪಕ್ಕ ತೋಡಿಗೆ ಅಡ್ಡವಾಗಿ ಉರುಳಿಬಿದ್ದು ನೀರಿನ ಹರಿವಿಗೆ ಅಡಚಣೆಯಾಗಿದೆ.

ಮಾಡ್ನೂರು ಗ್ರಾಮದ ಕೊಲಂಬೆ ಎಂಬಲ್ಲಿ ಇಸುಬು ಎಂಬುವರ ಮನೆ ಬದಿಗೆ ಪಕ್ಕದ ದರೆ ಕುಸಿದು ಬಿದ್ದು ಮನೆಗೆ ಹಾನಿ ಸಂಭವಿಸಿದೆ. ಮಾಡ್ನೂರು ಗ್ರಾಮದ ಅಮ್ಚಿನಡ್ಕ ಎಂಬಲ್ಲಿ ಮನೆ ಅಂಗಳಕ್ಕೆ ಮೇಲ್ಭಾಗದ ಮನೆ ಆವರಣ ಗೋಡೆ ಕುಸಿದು ಬಿದ್ದಿದೆ. ಅಮ್ಚಿನಡ್ಕದ ಬಿಂತೋಡಿ ಗೋಪಾಲ ಆಚಾರ್ಯ ಮನೆ ಅಂಗಳಕ್ಕೆ ಮೇಲ್ಭಾಗದಲ್ಲಿರುವ ಪುಷ್ಪಾವತಿ ಎಂಬುವರ ಮನೆ ಆವರಣ ಗೋಡೆ ಕುಸಿದು ಬಿದ್ದು ಹಾನಿ ಸಂಭವಿಸಿದೆ.

ಅಮ್ಚಿನಡ್ಕ ಸಮೀಪದ ಮಸೀದಿ ಬಳಿ ರಸ್ತೆ ಬದಿ ಗುಡ್ಡ ಕುಸಿದು ಅಮ್ಚಿನಡ್ಕ-ನೆಟ್ಟಾರು ರಸ್ತೆ ಮೇಲೆ ಮಣ್ಣು ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಲೋಕೋಪಯೋಗಿ ಇಲಾಖೆ ರಸ್ತೆಗೆ ಬಿದ್ದ ಮಣ್ಣು ತೆರವು ಕಾರ್ಯಾಚರಣೆ ನಡೆಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net