ಕೂಡಿಗೆ ವ್ಯಾಪ್ತಿಯಲ್ಲಿ ಬೇಸಿಗೆ ಮಳೆಯಿಂದ ಹಾನಿ

Rain damage
Published on

ಕುಶಾಲನಗರ:

ಕುಶಾಲನಗರ ತಾಲೂಕು ಕೂಡಿಗೆ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಭಾರಿ ಮಳೆಯಾಗಿದೆ. ಗಾಳಿ ಮತ್ತು ಮಳೆಯಿಂದ ಕೆಲವು ಮನೆಗಳ ಮನೆಯ ಸಿಮೆಂಟ್ ಶೀಟ್ ಬಿದ್ದು ನಷ್ಟ ಉಂಟಾಗಿದೆ. ಜತೆಯಲ್ಲಿ ಮನೆಯ ಸಾಮಗ್ರಿಗಳು ಸೇರಿದಂತೆ ಸಂಗ್ರಹ ಮಾಡಲಾಗಿದ್ದ ಭತ್ತ , ಅನೇಕ ಗೃಹೋಪಯೋಗಿ ವಸ್ತುಗಳಿಗೆ ಮಳೆಯಿಂದ ಹಾನಿ ಆಗಿದೆ.

ಕೂಡಿಗೆಯಲ್ಲಿ ವಿದ್ಯುತ್ ಪರಿವರ್ತಕದ ಮೇಲೆ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮವಾಗಿ ವಿದ್ಯುತ್ ಕಂಬಗಳು ಮುರಿದುಬಿದ್ದ ಕಾರಣ ಭಾರಿ ಅವಾಂತರ ಉಂಟಾಗಿದೆ. ಸಂಬAಧಿಸಿದ ಇಲಾಖೆಯವರು ಸ್ಧಳ ಪರಿಶೀಲನೆ ನಡೆಸಿ ಸರಿಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು- ಹಾರಂಗಿಯ ರಸ್ತೆಯಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಬಿದ್ದ ಪರಿಣಾಮ ಕುಶಾಲನಗರ-ಹಾರಂಗಿ ರಸ್ತೆಯ ಸಂಚಾರಕ್ಕೆ ಅಡ್ಡಿಯಾಯಿತು ಕುಶಾಲನಗರ ಅಗ್ನಿ ಶಾಮಕ ಸಿಬ್ಬಂದಿ ವರ್ಗ ಮರವನ್ನು ಕತ್ತರಿಸಿ ಸಂಚಾರಕ್ಕೆ ಅನುವುಮಾಡಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net