

ಭಟ್ಕಳ: ತಾಲೂಕಿನಲ್ಲಿ ಭಾನುವಾರ ರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ದೇವಸ್ಥಾನ ಹಾಗೂ ಮನೆಗಳು ಹಾನಿಗೀಡಾಗಿವೆ.
ಶಿರಾಲಿ ಗ್ರಾಮದ ಮಹ್ಮದ್ ಜಾಫರ್ ಎಂಬುವವರ ಮನೆ ಮೇಲೆ ಮರ ಬಿದ್ದು ಛಾವಣಿಗೆ ಹಾನಿಯಾಗಿದೆ. ಹಾಡುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂಜ್ ಕೆಕೊಡ್‌ನಲ್ಲಿ ಶ್ರೀ ಜೈನ ಕುದುರೆಬೀರಪ್ಪ ದೇವಸ್ಥಾನದ ಮೇಲೆ ಮರ ಬಿದ್ದು ಹಾನಿಯಾಗಿದೆ.
ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ತಾಲೂಕಿನ ಕೋಲಸಿರ್ಸಿ ಗ್ರುಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಕಾಂಪೌಂಡ್ ಗೋಡೆಗೆ ನೀರು ನುಗ್ಗಿ ಕುಸಿದು ಬಿದ್ದಿದೆ ಎಂದು ಸಂಘದ ಅಧ್ಯಕ್ಷ ವಿನಾಯಕ ಕೆ.ಆರ್. ತಿಳಿಸಿದ್ದಾರೆ.