

ಹನುಮಸಾಗರ: ಇಲ್ಲಿನ ಗ್ರಾಮ ದೇವತೆ ದ್ಯಾಮಾಂಭಿಕಾ ದೇವಿ ದೇವಸ್ಥಾನದಲ್ಲಿ ಮಂಗಳವಾರ ಉತ್ತಮ ಮಳೆ ಬೆಳೆಗಾಗಿ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.
ಇದನ್ನೂ ಓದಿ: ಮುಂದಿನ 3 ದಿನ ಜೋರು ಮಳೆ; ಎಲ್ಲೆಲ್ಲಿ ಯೆಲ್ಲೋ ಅಲರ್ಟ್?
ಪ್ರತಿ ವರ್ಷ ಮುಂಗಾರು ಪೂರ್ವದಲ್ಲಿ ಭೂಮಿಗೆ ಬೀಜ ಬಿತ್ತುವ ಮೊದಲು ಗ್ರಾಮ ದೇವತೆಗೆ ಉಡಿ ತುಂಬುವುದು ದಶಕಗಳಿಂದ ನಡೆಸಿಕೊಂಡು ಬಂದ ಸಂಪ್ರದಾಯ. ಐದು ವಾರಗಳ ಗ್ರಾಮದ 5 ದೇವತೆಗಳಿಗೆ ಉಡಿ ತುಂಬುತ್ತಾರೆ. ಈ ರೀತಿ ಉಡಿ ತುಂಬುವುದರಿಂದ ಮಳೆ ಉತ್ತಮವಾಗಿ ಆಗುತ್ತದೆ. ಬೆಳೆಗೆ ಯಾವುದೇ ರೀತಿಯ ಹಾನಿ ಆಗದೆ ಫಸಲು ಸಮೃದ್ಧವಾಗಿ ಬರುತ್ತದೆ ಎಂಬುವುದು ರೈತರ ನಂಬಿಕೆಯಾಗಿದೆ.
ವಾರ ಹಿಡಿದಿದ್ದರಿಂದ ಗ್ರಾಮದಲ್ಲಿ ಐದು ಮಂಗಳವಾರ ಕುಟ್ಟುವುದು, ಬಿಸುವುದನ್ನು ನಿಷೇಧಿಸಲಾಗುವುದು. ಮುತ್ತೈದೆಯರು ಗ್ರಾಮದ ಮಾಲಿಪಾಟೀಲ್ ಮನೆತನದಿಂದ ಉಡಿ ಸಾಮಾಗ್ರಿಗಳನ್ನು ತೆಗೆದುಕೊಂಡು ಬಂದು ಐದು ದೇವಸ್ಥಾನಗಳಲ್ಲಿ ಪ್ರತಿ ಮಂಗಳವಾರ ಪಂಚ ಕಳಸದೊಂದಿಗೆ ಡೊಳ್ಳು ಬಾರಿಸುವ ಮೂಲಕ ಉಡಿ ತುಂಬುತ್ತಾರೆ.
ಪ್ರಮುಖರಾದ ಸೂಚಪ್ಪ ದೇವರಮನಿ, ಭರಮಪ್ಪ ಬಿಂಗಿ, ಸಕ್ರಪ್ಪ ಬಿಂಗಿ, ಪರಸಪ್ಪ ಬಿಂಗಿ, ಮರೇಗೌಡ ಬೋದುರ, ದ್ಯಾಮಣ್ಣ ಬಿಂಗಿ, ನಾಗರಾಜ ಸೇಬಿನಕಟ್ಟಿ, ಮೌನೇಶ ಕಮ್ಮಾರ, ಶಿವಕುಮಾರ ಸಂಗಮದ, ಭೀಮಣ್ಣ ಕಮ್ಮಾರ ಇತರರಿದ್ದರು.