

ಬೆಳಗಾವಿ : ಜಿಲ್ಲಾದ್ಯಂತ ಗುರುವಾರವೂ ಧಾರಾಕಾರವಾಗಿ ಮಳೆ ಸುರಿದಿದ್ದು, ನದಿಗಳ ಒಳ ಹರಿವು ಮತ್ತಷ್ಟು ಹೆಚ್ಚಿದೆ. ಜುಲೈ 21ರಂದು ಹಿಡಕಲ್ ಡ್ಯಾಂನಲ್ಲಿ 13.126 ಟಿಎಂಸಿಯಷ್ಟಿದ್ದ ನೀರು 29.126 ಟಿಎಂಸಿ ಸಂಗ್ರಹವಗಿದೆ. ಅದೇ ರೀತಿ ಮಲಪ್ರಭಾ ಜಲಾಶಯ 8.684 ಟಿಎಂಸಿಯಷ್ಟಿದ್ದ ನೀರು 17.220 ಟಿಎಂಸಿ ನಷ್ಟು ಸಂಗ್ರಹಗೊಂಡಿದೆ.
ಜಿಲ್ಲೆಯಲ್ಲಿ ಎಲ್ಲ ಏಳು ನದಿಗಳಿಗೂ ಒಳ ಹರಿವು ಹೆಚ್ಚಾಗಿದ್ದು, ನದಿ ಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಕೆಳಮಟ್ಟದ 30 ಸೇತುವೆ ಗಳು ಈಗಾಗಲೇ ಮುಳುಗಡೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನಿರಂತರ ಮಳೆಯಿಂದಾಗಿ ವಿವಿಧೆಡೆ ಮನೆಗಳ ಗೋಡೆ ಕುಸಿದಿರುವ ಬಗ್ಗೆ ವರದಿಯಾಗಿದೆ.