ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ

web 1
Published on

ಚಿಕ್ಕಮಗಳೂರು: ನಗರ ಸೇರಿದಂತೆ ತಾಲೂಕಿನ ವಿವಿಧೆಡೆ ಮಧ್ಯಾಹ್ನ ಒಂದೂವರೆ ಗಂಟೆಗೂ ಹೆಚ್ಚುಕಾಲ ಧಾರಾಕಾರ ಮಳೆಯಾಗಿದ್ದರಿಂದ ವಾಹನ ಸವಾರರು ಪರದಾಡಬೇಕಾಯಿತು.

ಶುಕ್ರವಾರ ಮಧ್ಯಾಹ್ನ 12.30ಕ್ಕೆ ಆರಂಭವಾದ ಮಳೆ ಧಾರಾಕಾರವಾಗಿ ಸುರಿದಿದ್ದರಿಂದ ಚರಂಡಿ ನೀರು ಹರಿದು ರಸ್ತೆಗಳು ಜಲಾವೃತವಾದವು. ಹನುಮಂತಪ್ಪ ವೃತ್ತ, ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದ ಸಮೀಪ, ಕೋಟೆ ವೃತ್ತ ಸೇರಿದಂತೆ ಕೆಲವು ರ್ಪಾಂಗ್ ಸ್ಥಳಗಳಲ್ಲಿ ನೀರುಸಂಗ್ರಹವಾಗಿತ್ತು. ಅಯ್ಯಪ್ಪನಗರ, ಟಿಪ್ಪುನಗರ, ಕೆಂಪನಹಳ್ಳಿ ಸೇರಿದಂತೆ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಪರದಾಡಿದರು. ತಾಲೂಕಿನ ಬೀಕನಹಳ್ಳಿ, ಹಂಪಾಪುರ, ಅಲ್ಲಂಪುರ, ಅಂಬಳೆ, ಇಂದಾವರ, ಹಿರೇಕೊಳಲೆ ಸೇರಿದಂತೆ ಹಲವೆಡೆ ಮಳೆಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net